ಚಾಮರಾಜನಗರ: ಮೈಯಲ್ಲಿ ದೇವರು-ಭೂತ ಬಂದಿದೆ ನಂಬಿಕೆಯನ್ನು ದೊಡ್ಡವರಲ್ಲಿ ಕಾಣುತ್ತೇವೆ. ಆದರೆ, ಮಕ್ಕಳ ಮೈಯಲ್ಲೂ ಮಾರಿಯಮ್ಮ ದೇವಿ ಬಂದಿದ್ದಾಳೆ ಎನ್ನುವ ವಿಚಿತ್ರ ಘಟನೆ ಹನೂರು ತಾಲೂಕಿನ ಗೋಪಿನಾಥಂನಲ್ಲಿ ನಡೆದಿದೆ.
ಹೌದು, ನರಹಂತಕ ವೀರಪ್ಪನ್ ಊರಿನಲ್ಲಿ ಗಾಂಧಿ ತತ್ವ ಅನುಸರಿಸಿ ಬಲಿಯಾದ ಡಿಸಿಎಫ್ ಶ್ರೀನಿವಾಸನ್ ಅವರು ನಿರ್ಮಿಸಿರುವ ಮಾರಿಯಮ್ಮ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ 4-5 ಮಕ್ಕಳ ಮೈಯಲ್ಲೂ ಮಾರಿಯಮ್ಮ ಬಂದಿದ್ದಾಳೆ ಎನ್ನಲಾಗ್ತಿದೆ. ಅದೇ ರೀತಿ ಮಕ್ಕಳು ಕುಣಿದ ವಿಲಕ್ಷಣ ಘಟನೆ ಕಂಡುಬಂದಿದೆ. ಕಾವೇರಿ ನದಿಯಿಂದ 108 ಮಂದಿ ಮಹಿಳೆಯರು ಕುಂಭಹೊತ್ತು ಬರುವಾಗ ಹಿರಿಯ ಅರ್ಚಕ ಸೇರಿದಂತೆ 8-10 ಮಹಿಳೆಯರಿಗೆ ದೇವರು ಆವಾಹನೆಯಾದಂತೆ ನಾಲಿಗೆ ಹೊರಚಾಚಿ ನರ್ತಿಸಲಾರಂಭಿಸಿ ಕುಣಿದುಕೊಂಡೇ ದೇಗುಲದ ಬಳಿ ಬರುತ್ತಾರೆ. ಇವರೊಟ್ಟಿಗೆ 3-4 ಮಕ್ಕಳು ದೇವರು ಬಂದಂತೆ ಕುಣಿದು, ತಲೆ ಅಲ್ಲಾಡಿಸಿಕೊಂಡು ಕೂಗಾಡಿರುವುದು ಅಚ್ಚರಿಗೆ ಕಾರಣವಾಗಿದೆ.