ಕರ್ನಾಟಕ

karnataka

ETV Bharat / state

EXCLUSIVE... ದಕ್ಷಿಣ ಭಾರತದ ಏಕೈಕ ಕೊರೊನಾ ಮುಕ್ತ ಜಿಲ್ಲೆ ಚಾಮರಾಜನಗರ...! - ಚಾಮರಾಜನಗರ ಕೊರೊನಾ

ಇಡೀ ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ಮಹಾಮಾರಿ, ಕರ್ನಾಟಕದಲ್ಲಿಯೂ ತನ್ನ ಅಟ್ಟಹಾಸ ಮೆರೆದಿದೆ. ಸರ್ಕಾರ ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೂ ಸಹ ಗ್ರೀನ್​ ಝೋನ್​ನಲ್ಲಿದ್ದ ಜಿಲ್ಲೆಗಳಲ್ಲಿಯೂ ಸಹ ಕೊರೊನಾ ರೌದ್ರ ನರ್ತನ ನಡೆಸಿದೆ. ಆದರೆ ಇದುವರೆಗೂ ಚಾಮರಾಜನಗರದಲ್ಲಿ ಮಾತ್ರ ಕೊರೊನಾ ಕಂಡುಬಂದಿಲ್ಲ. ಹಾಗಾಗಿ ದಕ್ಷಿಣ ಭಾರತದಲ್ಲಿಯೇ ಇದು ಮೊದಲ ಜಿಲ್ಲೆ ಕೊರೊನಾ ರಹಿತ ಜಿಲ್ಲೆಯಾಗಿದೆ.

Chamarajanagar
ಚಾಮರಾಜನಗರ

By

Published : Jun 2, 2020, 6:08 PM IST

ಚಾಮರಾಜನಗರ: ರಾಜ್ಯ ಅಷ್ಟೇ ಅಲ್ಲದೇ ದಕ್ಷಿಣ ಭಾರತದ ಏಕೈಕ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಗಡಿಜಿಲ್ಲೆ ಚಾಮರಾಜನಗರ ಪಾತ್ರವಾಗಿದೆ.

ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಹಸಿರು ವಲಯವಾಗಿ ಕೊರೊನಾ ಮುಕ್ತ ಜಿಲ್ಲೆಯಾಗಿಯೇ ಉಳಿದಿರುವುದು ಚಾಮರಾಜನಗರ ಎಂಬುದು covid19 India.org ನೀಡಿರುವ ಅಧಿಕೃತ ಅಂಕಿ ಅಂಶಗಳಿಂದ ಖಚಿತವಾಗಿದೆ.

ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಇದುವರೆಗೂ ಕೊರೊನಾ ಕಂಡುಬಂದಿರಲಿಲ್ಲ. ಆದರೆ, ಇಂದು ತೆಲಂಗಾಣದ ವಾರಂಗಲ್ ಗ್ರಾಮೀಣ ಜಿಲ್ಲೆಯಲ್ಲಿ ಕೊರೊನಾ ಕೇಸ್ ಪತ್ತೆಯಾಗಿದೆ ಎಂದು ಈಟಿವಿ ಭಾರತಕ್ಕೆ ಮೂಲಗಳು ತಿಳಿಸಿವೆ. ಈ ಮೂಲಕ ಚಾಮರಾಜನಗರ ದಕ್ಷಿಣ ಭಾರತದ ಕೊರೊನಾ ಮುಕ್ತ ಏಕೈಕ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ದಕ್ಷಿಣ ಭಾರತದಲ್ಲೇ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ತಮಿಳುನಾಡಿನಲ್ಲಿ ಪತ್ತೆಯಾಗಿದ್ದರೂ ಸಹ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಅತ್ಯಂತ ಕಡಿಮೆ ಇರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಚಾಮರಾಜನಗರ ತಮಿಳುನಾಡು ಮತ್ತು ಕೇರಳ ಗಡಿಯನ್ನು ಹಂಚಿಕೊಳ್ಳುವ ಜೊತೆಗೆ ಸುತ್ತಮುತ್ತಲಿನ ನೆರೆ ಜಿಲ್ಲೆಗಳೂ ಕೆಂಪು ವಲಯವಾದರೂ ಚಾಮರಾಜನಗರ ಕೊರೊನಾದಿಂದ ಮುಕ್ತವಾಗಿಯೇ ಹೆಜ್ಜೆ ಹಾಕುತ್ತಿರುವುದು ರಾಷ್ಟಕ್ಕೆ ಈಗ ಮಾದರಿಯಾಗಿದೆ.

ABOUT THE AUTHOR

...view details