ಕರ್ನಾಟಕ

karnataka

ETV Bharat / state

₹40 ಸಾವಿರಕ್ಕೂ ಹೆಚ್ಚು ಮೌಲ್ಯದ ಅಕ್ರಮ ಮದ್ಯ ನಾಶ - ಕೊಳ್ಳೇಗಾಲದಲ್ಲಿ ಅಕ್ರಮ ಮದ್ಯ ನಾಶ

ಕೊಳ್ಳೇಗಾಲ ವ್ಯಾಪ್ತಿಯಲ್ಲಿ ದೊರೆತಿದ್ದ ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳು ಇಂದು ನಾಶಪಡಿಸಿದ್ದು, ಅಂದಾಜು 40 ಸಾವಿರಕ್ಕೂ ಅಧಿಕ ಬೆಲೆಯ ಮದ್ಯ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

destroyed illegal liquor
ಅಕ್ರಮ ಮದ್ಯ ನಾಶಪಡಿಸುತ್ತಿರುವ ಅಧಿಕಾರಿಗಳು

By

Published : Oct 28, 2020, 5:13 PM IST

ಕೊಳ್ಳೇಗಾಲ: 2019 - 20 ಸಾಲಿನಲ್ಲಿ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಲ್ಪಟ್ಟ ಹಾಗೂ ಸಾಗಿಸಲಾಗುತ್ತಿದ್ದ ಬಿಯರ್ ಸೇಂದಿ, ಕಳ್ಳ ಭಟ್ಟಿ ಸಾರಾಯಿ, ಹಾಗೂ ಇನ್ನಿತರ ಮದ್ಯಗಳನ್ನು ಅಬಕಾರಿ ಅಧಿಕಾರಿಗಳು ಇಂದು ನಾಶಪಡಿಸಿದರು.

ಅಕ್ರಮ ಮದ್ಯ ನಾಶಪಡಿಸುತ್ತಿರುವ ಅಧಿಕಾರಿಗಳು

ಅಬಕಾರಿ ಜಿಲ್ಲಾಧಿಕಾರಿ ಹಾಗೂ ಉಪ ಆಯ್ತುಕ್ತರ ಮಾರ್ಗದರ್ಶನದಂತೆ‌ 2019-20 ಸಾಲಿನಲ್ಲಿ ಅಕ್ರಮವಾಗಿ ದೊರೆತ ಭಾ.ತ.ಮ(ದೇಸಿ ತಯಾರಿಕ ಮದ್ಯ) 553 ಲೀಟರ್, ಬಿಯರ್ 2.64, ಸೇಂದಿ 46, ಕಳ್ಳ ಭಟ್ಟಿ ಸಾರಾಯಿ 19, ಬೆಲ್ಲದ ‌ಕೊಳೆ 47 ಲೀಟರ್ ಮದ್ಯ ಸೇರಿದಂತೆ ವಶಪಡಿಸಿಕೊಂಡಿದ್ದ ಚಕ್ಕೆಗಳನ್ನು ಸಹ ಇಂದು ಅಬಕಾರಿ ಅಧಿಕಾರಿಗಳು ನಾಶಪಡಿಸಿದ್ದಾರೆ. ಒಟ್ಟು ನಾಶಪಡಿಸಲಾದ ಮದ್ಯದ ಅಂದಾಜು ಬೆಲೆ 40 ಸಾವಿರಕ್ಕೂ ಹೆಚ್ಚಿನದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ABOUT THE AUTHOR

...view details