ಕರ್ನಾಟಕ

karnataka

ETV Bharat / state

ಗೆಲ್ತಾರೆಂದು ಅತೀ ಆತ್ಮವಿಶ್ವಾಸ ತೋರಿಸಿದ್ದು ಮುಳುವಾಯ್ತು.. ಆದರೂ ಧೃತಿಗೆಟ್ಟಿಲ್ವಂತೆ ಆರ್‌. ಧ್ರುವನಾರಾಯಣ - undefined

ಉಪ್ಪಾರ ಸಮಾಜದಿಂದ ಕಡಿಮೆ ಮತಗಳು ಬಂದಿದೆ. ಉಪ್ಪಾರ ಸಮಾಜಕ್ಕೆ ಕಾಂಗ್ರೆಸ್ ಹೊರತುಪಡಿಸಿ ಯಾವ ಪಕ್ಷವೂ ಸಹ ಸ್ಥಾನಮಾನ ನೀಡಿಲ್ಲ. ಕಾಂಗ್ರೆಸ್ ಪಕ್ಷ ಸ್ಥಾನಮಾನ ನೀಡಿದ್ದರೂ ಚುನಾವಣೆಯಲ್ಲಿ ಉಪ್ಪಾರರು ಕೈಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಹೇಳಿದರು.

ಧ್ರುವನಾರಾಯಣ

By

Published : Jun 29, 2019, 8:58 PM IST

ಚಾಮರಾಜನಗರ:ಉಪ್ಪಾರ ಸಮುದಾಯ ಕಾಂಗ್ರೆಸ್​ಗೆ ಮತ ಹಾಕದಿದ್ದರಿಂದ ತಾನು ಸೋತೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆರ್.ಧ್ರುವನಾರಾಯಣ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸೋಲಿನ ಪರಾಮರ್ಶೆ ಸಭೆಯಲ್ಲಿ ಅವರು ಮಾತನಾಡಿ, ಉಪ್ಪಾರ ಸಮಾಜದಿಂದ ಕಡಿಮೆ ಮತಗಳು ಬಂದಿದೆ. ಉಪ್ಪಾರ ಸಮಾಜಕ್ಕೆ ಕಾಂಗ್ರೆಸ್ ಹೊರತುಪಡಿಸಿ ಯಾವ ಪಕ್ಷವೂ ಸಹ ಸ್ಥಾನಮಾನ ನೀಡಿಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಸ್ಥಾನಮಾನವನ್ನು ನೀಡಿದ್ದರೂ ಚುನಾವಣೆಯಲ್ಲಿ ಉಪ್ಪಾರರು ಕೈಕೊಟ್ಟಿದ್ದಾರೆ. ಅವರಿಂದ ಹೆಚ್ಚಿನ ಮತಗಳ ನಿರೀಕ್ಷಿಸಿದ್ದೆ. ಆದರೆ, ಅಷ್ಟು ಮತಗಳು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸೋಲಾಗಿದ್ದರೂ ಎಲ್ಲೂ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಪ್ರತಿಯೊಬ್ಬ ಕಾರ್ಯಕರ್ತರೂ ನಮ್ಮ ಊರು, ನಮ್ಮ ಬೂತ್, ನಮ್ಮ ಜವಾಬ್ಧಾರಿ ಎಂದು ಗುರಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು.

ಸೋಲಿನ ಪರಾಮರ್ಶೆ ಸಭೆಯಲ್ಲಿ ಆರ್‌. ಧ್ರುವನಾರಾಯಣ

ಲೋಕಸಭೆ ಚುನಾವಣೆಯಲ್ಲಿ ಮತದಾರರ ತೀರ್ಪಿಗೆ ತಲೆ ಬಾಗುತ್ತೇನೆ. ಸೋಲು, ಗೆಲುವು ಎರಡನ್ನೂ ಸಮ ಮನಸ್ಸಿನಿಂದ ಸ್ವೀಕರಿಸಿದ್ದೇನೆ. ನನ್ನ ಸೋಲಿಗೆ ನಾನೇ ಕಾರಣ. ಪಕ್ಷ ಟಿಕೆಟ್ ನೀಡಿದ ಮೇಲೆ ಎದುರಾಳಿ ಎಷ್ಟೇ ಬಲಿಷ್ಠವಾಗಿದ್ದರೂ ಮುನ್ನುಗ್ಗಿ ಗೆಲ್ಲಬೇಕಿರುವುದು ನಾನೇ. ನಮ್ಮ, ನಮ್ಮ ಬೂತ್‍ನಲ್ಲಿ ಮತ ಕೊಡಿಸುವ ಕೆಲಸ ಮಾಡಿಕೊಡಬೇಕಿತ್ತು. ಲೀಡ್ ಕೊಡಿಸುವುದು ನಾಯಕತ್ವದ ಗುಣ. ಲೀಡ್ ಕೊಡದಿರುವುದು ನಾಯಕತ್ವದ ಪ್ರಶ್ನೆ ಉದ್ಭವವಾಗುತ್ತದೆ ಎಂದು ಪರೋಕ್ಷವಾಗಿ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತೇವೆ ಎಂಬ ಆಶಾಭಾವನೆ ಹುಟ್ಟಿತ್ತು. ಆದರೂ ಸೋಲಾಯಿತು. ಮೋದಿ ಅಲೆ ಮತ್ತು ಬಿಜೆಪಿ ಅಭ್ಯರ್ಥಿಯು ಈ ಭಾಗದಲ್ಲಿ ಹಿಂದೆ ಕಾರ್ಯಕರ್ತರನ್ನು ಬೆಳೆಸಿದ್ದು ಹಾಗೂ ಕಾಂಗ್ರೆಸ್‍ನ ಕೆಲವು ಕಾರ್ಯಕರ್ತರು ತಟಸ್ಥರಾಗಿದ್ದು ಮತ ಗಳಿಕೆಯಲ್ಲಿ ಕಡಿಮೆಯಾಗಲು ಕಾರಣವಾಯಿತು ಎಂದು ಹೇಳಿದರು.

ನಿಷ್ಠಾವಂತ ಲೋಕಸಭಾ ಸದಸ್ಯರಾಗಿದ್ದ ಧ್ರುವನಾರಾಯಣ ಅವರು ಸೋತರೂ ಮರುದಿನವೇ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು. ಸೋಲು, ಗೆಲುವನ್ನು ಅವರು ಸಮಾನವಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details