ಚಾಮರಾಜನಗರ:ಬಸ್ ಸಂಚಾರ ಮಾಡುತ್ತಿದ್ದ ವೇಳೆ ಚಾಲಕ ಮೂರ್ಛೆ ಹೋದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ ಜಮೀನಿಗಿಳಿದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಬಸ್ ಓಡಿಸುವಾಗಲೇ ಮೂರ್ಛೆ ಹೋದ ಚಾಲಕ, ಜಮೀನಿಗಿಳಿದ ಬಸ್... ಮುಂದೇನಾಯ್ತು?
ಯಳಂದೂರು ತಾಲೂಕಿನ ಯರಿಯೂರು ಹಾಗೂ ಮದ್ದೂರು ರಸ್ತೆ ನಡುವೆ ಈ ಅನಾಹುತ ಸಂಭವಿಸಿದೆ.ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಸಾವು-ನೋವು ಉಂಟಾಗಿಲ್ಲ.
ಯಳಂದೂರು ತಾಲೂಕಿನ ಯರಿಯೂರು ಹಾಗೂ ಮದ್ದೂರು ರಸ್ತೆ ನಡುವೆ ಈ ಅನಾಹುತ ಸಂಭವಿಸಿದೆ. ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಈ ಸಾರಿಗೆ ಬಸ್ ಬರುತ್ತಿತ್ತು. ಈ ವೇಳೆ ಬಸ್ನ ಚಾಲಕ ಎಂ.ಎನ್.ಯಾಲಕ್ಕಿ ಎಂಬವರಿಗೆ ಮೂರ್ಛೆ ಬಂದಿದೆ. ನಂತರ ನಿಯಂತ್ರಣ ಕಳೆದುಕೊಂಡ ಬಸ್, ಜಮೀನಿಗೆ ನುಗ್ಗಿದೆ. 10 ಅಡಿ ಆಳಕ್ಕೆ ಇಳಿದರೂ ಬಸ್ ಪಲ್ಟಿಯಾಗದಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ಬಸ್ನಲ್ಲಿ 28 ಪ್ರಯಾಣಿಕರು ಇದ್ದರೆಂದು ತಿಳಿದುಬಂದಿದ್ದು, ಓರ್ವ ಮಹಿಳೆಗೆ ಮಾತ್ರ ಸಣ್ಣ ಪುಟ್ಟ ಗಾಯವಾಗಿವೆ. ಚಾಲಕನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.