ಕರ್ನಾಟಕ

karnataka

ETV Bharat / state

ರಕ್ಷಿತಾರಣ್ಯದ ಹೆಸರಲ್ಲಿ ಸೋಮಣ್ಣ, ನರೇಂದ್ರ ರಾಜಕೀಯ: ಪರಿಸರವಾದಿ ಹೂವರ್ ಕಿಡಿ - ಪರಿಸರವಾದಿ ಹೂವರ್

ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ವಿಳಂಬ ಮಾಡುತ್ತಿದ್ದಾರೆ, ಚುನಾವಣೆ ಸಮೀಪ ಇರುವುದರಿಂದ ಹುಲಿ‌ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ತಡೆಹಿಡಿದು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪರಿಸರವಾದಿ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ.

Environmentalist  Joseph Hoover
ಪರಿಸರವಾದಿ ಜೋಸೆಫ್ ಹೂವರ್

By

Published : Nov 19, 2022, 4:20 PM IST

Updated : Nov 19, 2022, 4:45 PM IST

ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಲು‌ ಜನಪ್ರತಿನಿಧಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಪರಿಸರವಾದಿ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹೂವರ್, ಹನೂರು ಶಾಸಕ ಆರ್.ನರೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ರಾಜಕೀಯ ಕಾರಣಗಳಿಗಾಗಿ ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ವಿಳಂಬ ಮಾಡುತ್ತಿದ್ದಾರೆ.

ಪರಿಸರವಾದಿ ಜೋಸೆಫ್ ಹೂವರ್

ಚುನಾವಣೆ ಸಮೀಪ ಇರುವುದರಿಂದ ಹುಲಿ‌ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ತಡೆಹಿಡಿದು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.‌

ಮಲೆಮಹದೇಶ್ವರ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಮೇಲ್ದರ್ಜೆಗೇರಿಸುವ ಕರ್ನಾಟಕ ಅರಣ್ಯ ಇಲಾಖೆಯ ಪ್ರಸ್ತಾವನೆಗೆ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಹಸಿರು ನಿಶಾನೆ ತೋರಿದೆ. ಆದರೆ, 8 ತಿಂಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಜಿನ ಮೇಲೆ ಕಡತ ಧೂಳು ಹಿಡಿಯುತ್ತಿದೆ.

ಅಳಿವಿನಂಚಿನಲ್ಲಿರುವ ಹುಲಿಯ ಭವಿಷ್ಯ ಮತ್ತು ಜನರ ಪ್ರಯೋಜನಕ್ಕಾಗಿ ವರ್ಧಿತ ಜೀವವೈವಿಧ್ಯವು ಈಗ ರಾಜಕೀಯದ ಮೇಲೆ ಅವಲಂಬಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೈವಿಕ ವೈವಿಧ್ಯತೆ ರಕ್ಷಿಸುವ, ಸಂರಕ್ಷಿಸುವ, ವರ್ಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಹುಲಿ‌ ಸಂತತಿ, ಪರಿಸರ ಉಳಿವಿಗೆ ರಾಜಕೀಯ ಮಾಡುತ್ತಿದೆ ಎಂದು ಜೋಸೆಫ್‌ ಹೂವರ್ ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧ ಏಕೆ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ವನ್ಯಜೀವಿಧಾಮವು ಹುಲಿ ಸಂರಕ್ಷಿತ ಪ್ರದೇಶ ಮಾಡಿದರೇ
ಕಠಿಣ ಕಾನೂನು ಜಾರಿಯಾಗುತ್ತದೆ. ಇದರಿಂದ ಬುಡಕಟ್ಟು ಜನರು, ಕಾಡಿನಲ್ಲಿರುವ ಜನರಿಗೆ, ಮೂಲ ಸೌಕರ್ಯಗಳು ಸಿಗುವುದಿಲ್ಲ. ಜೊತೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೂ ತೊಂದರೆಯಾಗುತ್ತದೆ ಎನ್ನುವುದು ಪ್ರಮುಖ ಕಾರಣವಾಗಿದೆ.

ಹುಲಿಗಳನ್ನು ಬೇರೆಡೆ ಸ್ಥಳಾಂತರ ಮಾಡಿ ಎಂದು ಕೂಡ ಹನೂರು ಶಾಸಕ ನರೇಂದ್ರ ಒತ್ತಾಯಿಸಿದ್ದರು. ಶುಕ್ರವಾರವಷ್ಟೇ ಸಚಿವ ಸೋಮಣ್ಣ ಹುಲಿ ಸಂರಕ್ಷಿತ ಪ್ರದೇಶ ಮಾಡಬಾರದು ಎಂದು ಸಿಎಂಗೆ ಸಂಪುಟ ಸಭೆಯಲ್ಲಿ ಹೇಳಿದ್ದೇನೆ, ಹುಲಿ ರಕ್ಷಿತಾರಣ್ಯ ಆಗಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ:ಸಿಹಿ ಜೇನು ಸಾಮಾನ್ಯ.. ಬಿಳಿಗಿರಿ ಬನದಲ್ಲಿ ಸಿಗುತ್ತಿದೆ ಕಹಿ ಜೇನು

Last Updated : Nov 19, 2022, 4:45 PM IST

ABOUT THE AUTHOR

...view details