ಚಾಮರಾಜನಗರ: ಆಕ್ಸಿಜನ್ ಇಲ್ಲದೇ 24 ಮಂದಿ ಮೃತಪಟ್ಟ ಘಟನೆ ನಡೆದದ್ದು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಾದರೂ ಕೂಡ ಅದರ ತನಿಖೆಗಾಗಿ ನ್ಯಾಯಾಂಗ ಆಯೋಗದ ಕಚೇರಿ ತೆರೆದಿರುವುದು ಮಾತ್ರ ಮೈಸೂರಲ್ಲಿ. ಮೇ 5ರಿಂದಲೇ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ನ್ಯಾ. ಬಿ ಎ ಪಾಟೀಲ್ ವಿಚಾರಣಾ ಆಯೋಗದ ಕಚೇರಿ ತೆರೆದಿದ್ದು, ದುರಂತಕ್ಕೆ ಸಂಬಂಧಿಸಿದಂತೆ ಮೃತರ ವಾರಸುದಾರರು, ಸಂಘ-ಸಂಸ್ಥೆಗಳು, ದೂರು ನೀಡುವವರು 15 ದಿನದೊಳಗಾಗಿ ಕೊಡಬಹುದಾಗಿದೆ. ಆದರೆ, ಲಾಕ್ಡೌನ್ ಹಿನ್ನೆಲೆ ಮೈಸೂರಿಗೆ ತೆರಳಲಾಗದೇ ಸಂತ್ರಸ್ತ ಕುಟುಂಬಗಳು ಪರದಾಡುತ್ತಿವೆ.
ಚಾಮರಾಜನಗರದಲ್ಲಿ ಜನ ಸತ್ತಿರೋದು, ಮೈಸೂರಲ್ಲಿ ತನಿಖಾ ಕಚೇರಿ ಸ್ಥಾಪನೆ.. 'ನ್ಯಾಯ'ಕ್ಕಾಗಿ ಸಂತ್ರಸ್ತರ ಅಲೆದಾಟ - : ಆಕ್ಸಿಜನ್ ಇಲ್ಲದೇ ಹತ್ತಾರು ಮಂದಿ ಮೃತಪಟ್ಟ ಘಟನೆ
ದುರಂತ ನಡೆದಿರುವುದು ಚಾಮರಾಜನಗರದಲ್ಲಿ, ಮೃತಪಟ್ಟವರು ಹೆಚ್ಚಿನ ಮಂದಿ ಚಾಮರಾಜನಗರ ಜಿಲ್ಲೆಯವರು. ಆದರೆ, ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿರುವುದರಿಂದ ಈ ಲಾಕ್ಡೌನ್ನಲ್ಲಿ ನ್ಯಾಯ ಕೇಳುವುದಾದರೂ ಹೇಗೆ.? ಚಾಮರಾಜನಗರದಲ್ಲಿ ಆಯೋಗದ ಕಚೇರಿ ತೆರೆಯಬೇಕೆಂದು ಕಾಂಗ್ರೆಸ್ ಮುಖಂಡ ಪು.ಶ್ರೀನಿವಾಸ ನಾಯಕ್ ಒತ್ತಾಯಿಸಿದ್ದಾರೆ..
ಅಂತರ ಜಿಲ್ಲೆಗೆ ಪ್ರವೇಶ ನಿರ್ಬಂಧ, ವಾಹನ ಓಡಾಟವಿಲ್ಲವಾದ್ದರಿಂದ ದೂರು ಕೊಡಲು ಕಷ್ಟವಾಗುತ್ತಿದೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟರೂ ಪರಿಹಾರ ಪಟ್ಟಿಯಿಂದ ಪತಿ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 2-3 ದಿನಗಳಿಂದಲೂ ಬಿಸಲವಾಡಿಯ ಜ್ಯೋತಿ ಎಂಬುವರು ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಾಮರಾಜನಗರಕ್ಕೆ ಹೇಗೋ ಬರಬಹುದು. ಆದರೆ, ದೂರದ ಮೈಸೂರಿಗೆ ತೆರಳುವುದು ಹೇಗೆ..? ಎಂದು ಜ್ಯೋತಿ ಅಳಲು ತೋಡಿಕೊಂಡಿದ್ದಾರೆ.
ದುರಂತ ನಡೆದಿರುವುದು ಚಾಮರಾಜನಗರದಲ್ಲಿ, ಮೃತಪಟ್ಟವರು ಹೆಚ್ಚಿನ ಮಂದಿ ಚಾಮರಾಜನಗರ ಜಿಲ್ಲೆಯವರು. ಆದರೆ, ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿರುವುದರಿಂದ ಈ ಲಾಕ್ಡೌನ್ನಲ್ಲಿ ನ್ಯಾಯ ಕೇಳುವುದಾದರೂ ಹೇಗೆ.? ಚಾಮರಾಜನಗರದಲ್ಲಿ ಆಯೋಗದ ಕಚೇರಿ ತೆರೆಯಬೇಕೆಂದು ಕಾಂಗ್ರೆಸ್ ಮುಖಂಡ ಪು.ಶ್ರೀನಿವಾಸ ನಾಯಕ್ ಒತ್ತಾಯಿಸಿದ್ದಾರೆ.