ಕರ್ನಾಟಕ

karnataka

ETV Bharat / state

ಚಾಮರಾಜನಗರ: ವಸತಿಗೃಹದ ಸಮಸ್ಯೆಗೆ ಕಚೇರಿಯಲ್ಲಿ ವಿಷ ಸೇವಿಸಿದ ನೌಕರ - ಈಟಿವಿ ಭಾರತ್​ ಕನ್ನಡ

ರೇಷ್ಮೆ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಲೋಕೇಶ್ ತಮ್ಮ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾರೆ.

employee-poisoned-
ವಿಷ ಸೇವಿಸಿದ ನೌಕರ

By

Published : Aug 17, 2022, 10:40 PM IST

ಚಾಮರಾಜನಗರ : ರೇಷ್ಮೆ ಇಲಾಖೆ ನೌಕರರೊಬ್ಬರು ಕಚೇರಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಸಂಜೆ ನಗರದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲ್ಲೂಕಿನ ಮಲ್ಲಳ್ಳಿಮಾಳ ಗ್ರಾಮದ ಲೋಕೇಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿರುವ ನೌಕರ.

ರೇಷ್ಮೆ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ 1 ವರ್ಷಗಳಿಂದ ವಸತಿ ಗೃಹಕ್ಕಾಗಿ ಅರ್ಜಿ ಸಲ್ಲಿಸಿದ್ದರಂತೆ. ಇಂದು ಕೂಡ ಮನವಿ ಮಾಡಿದರೂ ಮೇಲಾಧಿಕಾರಿಗಳು ವಸತಿಗೃಹ ಕೊಡುವ ಭರವಸೆ ನೀಡದಿದ್ದರಿಂದ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಲೋಕೇಶ್ ಅವರನ್ನು ದಾಖಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ :ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಸಜೆ, ₹60 ಸಾವಿರ ದಂಡ

ABOUT THE AUTHOR

...view details