ಕರ್ನಾಟಕ

karnataka

ಕೆ.ಗುಡಿ ಸಫಾರಿ ವೇಳೆ ಹಿಂದೆ-ಮುಂದೆ ಏಕಕಾಲದಲ್ಲಿ ದಾಳಿ ನಡೆಸಿದ ಸಲಗಗಳು: ವಿಡಿಯೋ

By

Published : Mar 15, 2021, 11:52 AM IST

ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ‌. ಗುಡಿ ಸಫಾರಿಯ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ವೇಳೆ, ಮುಂದಿನಿಂದಲೂ ಬಂದ ಮತ್ತೊಂದು ಸಲಗ ಅಡ್ಡಹಾಕಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ.

Elephants attack during the K.Gudi Safari
ಕೆ.ಗುಡಿ ಸಫಾರಿ ವೇಳೆ ಹಿಂದೆ-ಮುಂದೆ ಏಕಕಾಲದಲ್ಲಿ ದಾಳಿ ನಡೆಸಿದ ಸಲಗಗಳು

ಚಾಮರಾಜನಗರ: ಕೆ.ಗುಡಿ ಸಫಾರಿಗೆ ತೆರಳಿದ್ದ ವೇಳೆ ಹಿಂದಿನಿಂದ ಒಂದು ಹಾಗೂ ಮುಂದಿನಿಂದ ಒಂದು ಆನೆಗಳು ಪ್ರವಾಸಿಗರ ಜೀಪ್​​ ಅಡ್ಡಗಟ್ಟಿರುವ ಘಟನೆ ನಡೆದಿದೆ.

ಕೆ.ಗುಡಿ ಸಫಾರಿ ವೇಳೆ ಹಿಂದೆ-ಮುಂದೆ ಏಕಕಾಲದಲ್ಲಿ ದಾಳಿ ನಡೆಸಿದ ಸಲಗಗಳು

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ‌. ಗುಡಿ ಸಫಾರಿಯ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ವೇಳೆ, ಮುಂದಿನಿಂದಲೂ ಬಂದ ಮತ್ತೊಂದು ಸಲಗ ಅಡ್ಡಹಾಕಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಓದಿ:ಇಂದು ಎರಡೆರಡು ಪ್ರತಿಭಟನೆ ಬಿಸಿ: ಒಂದೆಡೆ ಬ್ಯಾಂಕ್, ಇನ್ನೊಂದೆಡೆ ಅಂಗನವಾಡಿ ಕಾರ್ಯಕರ್ತೆಯರ ಪ್ರೊಟೆಸ್ಟ್​

ಈ ಕುರಿತು, ಕೆ.ಗುಡಿ ಆರ್​ಎಫ್​​ಒ ಶಾಂತಪ್ಪ ಪೂಜಾರ್ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಭತ್ತದಗದ್ದೆ ಕೆರೆ ರಸ್ತೆಯಲ್ಲಿ 9 ಆನೆಗಳ ಗುಂಪಿದೆ ಎಂದರು‌‌. ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುವುದು ಸಹಜ. ಆದರೆ, ಎರಡೆರಡು ಸಲಗಗಳು ಸಫಾರಿ ವಾಹನ ಅಡ್ಡಗಟ್ಟಿದ ಘಟನೆಗಳು ತೀರಾ ಅಪರೂಪ ಎಂದರು.

ABOUT THE AUTHOR

...view details