ಕರ್ನಾಟಕ

karnataka

ETV Bharat / state

ಜೀಪ್​ ಗುದ್ದಲು ಬಂದ ಕಾಡಾನೆ.. ಹಳೇ ವಿಡಿಯೋ ಸಖತ್ ವೈರಲ್ - ಚಾಮರಾಜನಗರದಲ್ಲಿ ಜೀಪ್ ಗುದ್ದಲು ಬಂದ ಕಾಡಾನೆ

ರಸ್ತೆಯೊಂದರ ಸಮೀಪ ಮೇಯುತ್ತಿದ್ದ ಎರಡು ಆನೆಗಳನ್ನು ಓಪನ್ ಜೀಪಿನಲ್ಲಿ ಕುಳಿತು ನೋಡುತ್ತಿದ್ದವರ ಮೇಲೆ ಏಕಾಏಕಿ ಸಲಗ ದಾಳಿ ಮಾಡಲು ಬಂದಿದೆ. ಅದೃಷ್ಟವಶಾತ್​ ಜೀಪ್​ನಲ್ಲಿದ್ದವರು ಸ್ವಲ್ಪದರಲ್ಲೇ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.

elephant
ಕಾಡಾನೆ

By

Published : Mar 23, 2022, 4:23 PM IST

Updated : Mar 23, 2022, 4:51 PM IST

ಚಾಮರಾಜನಗರ: ಜೀಪ್​ ಗುದ್ದಲು ಬಂದ ಕಾಡಾನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ. ಇದು ವಾಟ್ಸಪ್ ಸ್ಟೇಟಸ್​ಗಳಲ್ಲಿ ಹವಾ ಸೃಷ್ಟಿಸಿದೆ. ರಸ್ತೆಯೊಂದರ ಸಮೀಪ ಮೇಯುತ್ತಿದ್ದ ಎರಡು ಆನೆಗಳನ್ನು ಓಪನ್ ಜೀಪ್​ನಲ್ಲಿ ಕುಳಿತು ನೋಡುತ್ತಿದ್ದವರ ಮೇಲೆ ಏಕಾಏಕಿ ಸಲಗ ದಾಳಿ ಮಾಡಲು ಬಂದಿದೆ. ಅದೃಷ್ಟವಶಾತ್​ ಜೀಪ್​ನಲ್ಲಿದ್ದವರು ಸ್ವಲ್ಪದರಲ್ಲೇ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.

ಘಟನೆ ಬಂಡೀಪುರದಲ್ಲಿ ನಡೆದಿದೆ ಎಂಬುದಾಗಿ ಮಾಹಿತಿ ಹರಿದಾಡುತ್ತಿದೆ. ಆದ್ರೆ ಇದಕ್ಕೆ ಯಾವುದೇ ಖಚಿತತೆ ಇಲ್ಲ. ಮೇಲ್ನೋಟಕ್ಕೆ ಮಸನಿಗುಡಿಯಲ್ಲಿ ಕಳೆದ ಮಳೆಗಾಲದಲ್ಲಿ ನಡೆದಿದ್ದ ವಿಡಿಯೋ ಇದಾಗಿರಬಹುದು ಎಂದು ಕೆಲವರು ಅಂದಾಜಿಸಿದ್ದಾರೆ. ಏನೇ ಆದರೂ ಸ್ವಲ್ಪದರಲ್ಲೇ ಆನೆ ದಾಳಿಯಿಂದ ಜೀಪ್​ನಲ್ಲಿದ್ದವರು ಬಚಾವಾದ ವಿಡಿಯೋ ನೋಡುಗರನ್ನು ರೋಮಾಂಚನಗೊಳಿಸಿದೆ.

ಜೀಪ್ ಗುದ್ದಲು ಬಂದ ಕಾಡಾನೆ ವಿಡಿಯೋ ವೈರಲ್ ಆಗಿದೆ

ಓದಿ:ಶ್ರೀರಂಗನಾಥ ಸ್ವಾಮಿ ದೇವಾಲಯದ ಜಮೀನು ದುರುಪಯೋಗ ಪ್ರಕರಣ ಎಸ್ಐಟಿ ತನಿಖೆಗೆ

Last Updated : Mar 23, 2022, 4:51 PM IST

ABOUT THE AUTHOR

...view details