ಚಾಮರಾಜನಗರ:ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ಪುಣಜನೂರು ಸಮೀಪ ಒಂಟಿ ಸಲಗವೊಂದು ರಾತ್ರಿ ವೇಳೆ ವಾಹನಗಳಿಗೆ ಅಡ್ಡಹಾಕಿ ಪುಂಡಾಟ ತೋರುತ್ತಿದ್ದು, ಪ್ರಯಾಣಿಕರಿಗೆ, ರೈತರಿಗೆ ತೊಂದರೆಯಾಗಿದೆ.
ರಾತ್ರಿ ವೇಳೆ ವಾಹನಗಳನ್ನು ತಡೆಯುವ ಗಜರಾಜ, ಪುಂಡಾನೆ ಪ್ರತಾಪಕ್ಕೆ ಹೈರಾಣಾದ ವಾಹನ ಸವಾರರು - chamrajnagar elephant news
ಮಧ್ಯರಾತ್ರಿ ವೇಳೆ ಬರುವ ಗಜರಾಜ ವಾಹನಗಳನ್ನು ಅಟ್ಟಾಡಿಸುತ್ತಿರುವ ಘಟನೆ ಕಳೆದ 15 ದಿನದಿಂದ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆ ಮಧ್ಯ ತಾಸುಗಟ್ಟಲೇ ನಿಂತು ವಾಹನ ಸವಾರರಿಗೆ ತಲೆನೋವು ತಂದಿಡುತ್ತಿದ್ದಾನೆ.
![ರಾತ್ರಿ ವೇಳೆ ವಾಹನಗಳನ್ನು ತಡೆಯುವ ಗಜರಾಜ, ಪುಂಡಾನೆ ಪ್ರತಾಪಕ್ಕೆ ಹೈರಾಣಾದ ವಾಹನ ಸವಾರರು chm](https://etvbharatimages.akamaized.net/etvbharat/prod-images/768-512-5212587-thumbnail-3x2-.jpg)
ಪುಂಡ ಆನೆಯ ಆಟಕ್ಕೆ ಬೀಳಬೇಕಿದೆ ಬ್ರೇಕ್..!
ಪುಂಡ ಆನೆಯ ಆಟಕ್ಕೆ ಬೀಳಬೇಕಿದೆ ಬ್ರೇಕ್..!
ಮಧ್ಯರಾತ್ರಿ ವೇಳೆ ಬರುವ ಗಜರಾಜ ವಾಹನಗಳನ್ನು ಅಟ್ಟಾಡಿಸುತ್ತಿರುವ ಘಟನೆ ಕಳೆದ 15 ದಿನದಿಂದ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆ ಮಧ್ಯ ತಾಸುಗಟ್ಟಲೇ ನಿಂತು ವಾಹನ ಸವಾರರಿಗೆ ತಲೆನೋವು ತಂದಿಡುತ್ತಿದ್ದಾನೆ.
ವಾಹನಗಳನ್ನು ಕಂಡ ಕೂಡಲೇ ದಾಳಿ ಮಾಡಲು ಮುಂದಾಗುವ ಕಾಡಾನೆಯನ್ನು ಬಿಆರ್ ಟಿ ಅರಣ್ಯಾಧಿಕಾರಿಗಳಾಗಲಿ ಇಲ್ಲವೇ ಸತ್ಯಮಂಗಲಂ ಅರಣ್ಯಾಧಿಕಾರಿಗಳಾಗಲಿ ಕಾಡಿನೊಳಕ್ಕೆ ಕಳುಹಿಸಿ ರಸ್ತೆ ಮಧ್ಯೆ ಬರದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.