ಕರ್ನಾಟಕ

karnataka

ETV Bharat / state

ಲಾರಿ ಚಾಲಕರಿಗೆ ಆಟ-ಆನೆಗಳಿಗೆ ಭರ್ಜರಿ ಊಟ: ಕಾರು, ಬೈಕ್​​ಗಳಿಗೆ ಟ್ರಾಫಿಕ್ ಜಾಮ್​ ಸಂಕಟ - ಟ್ರಾಫಿಕ್ ಜಾಮ್​

ಲಾರಿ ಚಾಲಕರು ಕಬ್ಬು ಹಾಕಿ ಅಭ್ಯಾಸ ಮಾಡಿಸಿರುವುದರಿಂದ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲಿನಲ್ಲೂ ಆನೆಗಳಿಂದ ಟ್ರಾಫಿಕ್ ಜಾಮ್​ ಉಂಟಾಗುತ್ತಿದೆ.

Traffic jam on Bangalore-Dindigul National Highway
ಆನೆಗಳ ಸಂಚಾರ: ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಂ

By

Published : Sep 22, 2020, 12:10 PM IST

ಚಾಮರಾಜನಗರ:ಲಾರಿ ಚಾಲಕರು ಬಿಸಾಡುವ ಕಬ್ಬು ತಿನ್ನಲು ಬರುವ ಗಜಪಡೆಯಿಂದಾಗಿ ನಿತ್ಯ ಅರ್ಧ ತಾಸು- ಒಂದು ತಾಸು ಟ್ರಾಫಿಕ್ ಜಾಮ್​ ಆಗುತ್ತಿರುವ ಘಟನೆ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬರುತ್ತಿದೆ.

ಆನೆಗಳ ಸಂಚಾರ: ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್​

ಕರ್ನಾಟಕ ಗಡಿಯಲ್ಲಿರುವ ತಾಳವಾಡಿ, ತಲೆಮಲೈನಿಂದ ಕಬ್ಬು ತುಂಬಿದ ಲಾರಿಗಳು ದಾರಿ ಮಧ್ಯೆ ಆನೆಗಳಿಗೆಂದು ಕಬ್ಬಿನ ಕಟ್ಟುಗಳನ್ನು ಬಿಸಾಡಿ ತೆರಳುತ್ತಿರುವುದರಿಂದ 5-6 ಆನೆಗಳ ಹಿಂಡು ನಡು ರಸ್ತೆಗೆ ದಾಂಗುಡಿ ಇಟ್ಟು ಅರ್ಧ ತಾಸು- ಒಂದು ತಾಸು ವಿಹರಿಸಿ ಕಬ್ಬು ತಿಂದು ರಸ್ತೆ ಬದಿಗೆ ಸರಿಯುತ್ತಿವೆ. ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರಲಿದ್ದು, ಈ ಹಿಂದೆ ಕೇವಲ ರಾತ್ರಿ ವೇಳೆಯಲ್ಲಷ್ಟೇ ಗಜಪಡೆ ರಸ್ತೆಗಿಳಿಯುತ್ತಿದ್ದವು. ಈಗ ಲಾರಿ ಚಾಲಕರು ಕಬ್ಬು ಹಾಕಿ ಅಭ್ಯಾಸ ಮಾಡಿಸಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲಿನಲ್ಲೂ ಆನೆಗಳಿಂದ ಟ್ರಾಫಿಕ್ ಜಾಮ್​ ಉಂಟಾಗುತ್ತಿದೆ.

ಬೈಕ್ ಹಾಗೂ ಕಾರಿನಲ್ಲಿ ಸಂಚರಿಸುವವರು ಆನೆಗಳ ಭಯದಿಂದಲೇ ಸಂಚರಿಸುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ದಿನಕ್ಕೆ 4-5 ಬಾರಿ ಆನೆಗಳನ್ನು ಕಾಡಿಗಟ್ಟುವ ಕೆಲಸವಾಗಿದೆ.

ABOUT THE AUTHOR

...view details