ಚಾಮರಾಜನಗರ: ಬಾಳೆ ಸಾಗಿಸುತ್ತಿದ್ದ ಬೊಲೆರೊ ವಾಹನವನ್ನು ಅಡ್ಡಗಟ್ಟಿ ಒಂಟಿ ಸಲಗ ದಾಂಧಲೆ ನಡೆಸಿರುವ ಘಟನೆ ತಮಿಳುನಾಡಿನ ಬಣ್ಣಾರಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಶುಕ್ರವಾರ ನಡೆದಿದೆ.
Watch: ಬಾಳೆಗಾಗಿ ಬೊಲೆರೊ ಏರಿದ ಒಂಟಿ ಸಲಗ: ಹಾರ್ನ್ಗೆ ಬೆಚ್ಚಿ ಜನರನ್ನು ಅಟ್ಟಾಡಿಸಿದ ಗಜರಾಜ
ಒಂಟಿ ಸಲಗವೊಂದು ಬೊಲೆರೊ ವಾಹನ ಅಡ್ಡಗಟ್ಟಿ ಬಾಳೆ ತಿನ್ನಲು ಪ್ರಯತ್ನಿಸಿದ ಘಟನೆ ತಮಿಳುನಾಡಿನ ಬಣ್ಣಾರಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ನಡೆದಿದೆ.
ತಮಿಳುನಾಡಿನಿಂದ ಮೈಸೂರಿನ ಬಾಳೆಮಂಡಿಗೆ ಬೊಲೆರೊ ವಾಹನದಲ್ಲಿ ಬಾಳೆ ತರಲಾಗುತ್ತಿತ್ತು. ಈ ವೇಳೆ ವಾಹನವನ್ನು ತಡೆದ ಗಜರಾಜ, ಪಿಕಪ್ ಮೇಲೆ ಹತ್ತಿ ಹಣ್ಣು ತಿನ್ನಲು ಸರ್ವ ಪ್ರಯತ್ನ ನಡೆಸಿದೆ. ಆದರೆ ಟಾರ್ಪಲ್ ಕಟ್ಟಿದ್ದರಿಂದ ಹಣ್ಣು ತಿನ್ನಲಾಗದೆ ವಾಹನವನ್ನು ಅಲುಗಾಡಿಸಿದೆ.
ಆನೆ ಕಂಡ ಇತರೆ ವಾಹನ ಸವಾರರು ಜೋರಾಗಿ ಹಾರ್ನ್ ಮಾಡಿದ್ದಾರೆ. ಹಾರ್ನ್ ಶಬ್ದಕ್ಕೆ ಬೆಚ್ಚಿದ ಆನೆ ವಿಡಿಯೋ, ಫೋಟೋ ತೆಗೆಯುತ್ತಿದ್ದ ಜನರನ್ನು ಅಟ್ಟಾಡಿಸಿದೆ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯಾಸಪಟ್ಟು ಆನೆಯನ್ನು ಕಾಡಿಗಟ್ಟಿದ್ದು, ಒಂದೂವರೆ ತಾಸು ಬೆಂಗಳೂರು-ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.