ಚಾಮರಾಜನಗರ: ಆನೆಯೊಂದು ತನ್ನ ಮರಿಯೊಂದಿಗೆ ರಸ್ತೆಯುದ್ದಕ್ಕೂ ಕಬ್ಬಿನ ಲಾರಿಗಾಗಿ ಹುಡುಕಾಡಿತು. ಈ ವೇಳೆ ಪ್ರತಿ ವಾಹನವನ್ನೂ ತಪಾಸಣೆ ನಡೆಸಿತು. ನಂತರ ಕಬ್ಬಿನ ಲಾರಿ ಸಿಕ್ಕ ಕೂಡಲೇ ಕಬ್ಬು ಸವಿದ ಘಟನೆ ಭಾನುವಾರ ಸಂಜೆ ಕರ್ನಾಟಕ-ತಮಿಳುನಾಡು ಗಡಿ ಸಮೀಪವಿರುವ ಆಸನೂರಲ್ಲಿ ನಡೆದಿದೆ.
ನೋಡಿ: ಕಬ್ಬಿನ ಲಾರಿ ಅಡ್ಡಹಾಕಿ, ಮರಿಗೂ ಜಲ್ಲೆ ಕೀಳುವ ಕಲೆ ಕಲಿಸಿದ ಗಜರಾಜ - ಕಬ್ಬಿನ ಲಾರಿ
ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಆಸನೂರು ಸಮೀಪ ಭಾನುವಾರ ಸಂಜೆ ಆನೆಯೊಂದು ತನ್ನ ಮರಿಯೊಟ್ಟಿಗೆ ಆಹಾರಕ್ಕಾಗಿ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಿ, ಕಬ್ಬಿನ ಲಾರಿ ಸಿಕ್ಕ ಕೂಡಲೇ ಅಡ್ಡಹಾಕಿ ಕಬ್ಬು ಸವಿದ ಘಟನೆ ನಡೆಯಿತು.
ಹೆದ್ದಾರಿ ಮಧ್ಯೆ ಕಬ್ಬು ಸವಿದ ಗಜರಾಜ
ಜಿಟಿಜಿಟಿ ಮಳೆಯಲ್ಲಿ ರಸ್ತೆ ಮಧ್ಯೆ ಲಾರಿ ನಿಂತಿದ್ದರಿಂದ 15-20 ನಿಮಿಷಗಳ ಕಾಲ ವಾಹನ ಸವಾರರು ಪ್ರಯಾಣಿಸಲು ಹರಸಾಹಸಪಟ್ಟರು. ಎಷ್ಟೇ ಹಾರ್ನ್ ಮಾಡಿದರೂ ಕೂಡ ಚಲಿಸದ ಗಜರಾಜ ಕಬ್ಬು ತಿಂದ ಬಳಿಕವೇ ಸವಾರರಿಗೆ ದಾರಿಬಿಟ್ಟು ಕೊಟ್ಟಿತು.
ಲಾರಿ ಚಾಲಕರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದು, 'ಈಟಿವಿ ಭಾರತ'ಕ್ಕೆ ನೀಡಿದ್ದಾರೆ.