ಚಾಮರಾಜನಗರ: ಆನೆದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಸಿಇಎನ್ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಹರದನಹಳ್ಳಿಯ ಅರಕಲವಾಡಿ ರಸ್ತೆಯಲ್ಲಿ ನಡೆದಿದೆ.
ಆನೆ ದಂತ ಮಾರಾಟಕ್ಕೆ ಯತ್ನ: ನಾಲ್ವರು ಆರೋಪಿಗಳ ಬಂಧನ - ಚಾಮರಾಜನಗರ ಆನೆ ದಂತ ಮಾರಾಟ
ಗುಂಡ್ಲುಪೇಟೆ ಮೂಲದ ಅನಿಲ್, ರಘು, ಚಾಮರಾಜನಗರ ಮೂಲದ ಶಿವಶಂಕರ್, ಸುರೇಶ್ ಬಂಧಿತ ಆರೋಪಿಗಳು. ಲಕ್ಷಾಂತರ ರೂ. ಬೆಳೆಬಾಳುವ 2 ಕೆಜಿ ಜೋಡಿದಂತಗಳ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.
ಆನೆ ದಂತ ಮಾರಾಟ

ಆರೋಪಿಗಳಿಂದ ಜೋಡಿದಂತ, ನಾಲ್ಕು ಮೊಬೈಲ್ ಹಾಗೂ 2 ಬೈಕನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಸಿಇಎನ್ ಪಿ.ಐ ಮೋಹಿತ್ ಸಹದೇವ್, ಸ್ವಾಮಿ, ರಾಜು, ಮಂಜುನಾಥ್ ಇನ್ನಿತರ ಸಿಬ್ಬಂದಿ ಭಾಗವಹಿಸಿದ್ದರು.