ಕರ್ನಾಟಕ

karnataka

ETV Bharat / state

ಕಬ್ಬಿನಗದ್ದೆಗೆ ನುಗ್ಗಿದ ಒಂಟಿ ಸಲಗ:  ಟ್ರ್ಯಾಕ್ಟರ್​​​​ನಲ್ಲಿ ಚೇಸ್ ಮಾಡಿ ಕಾಡಿಗಟ್ಟಿದ ಯುವಕರು! - undefined

ಸೆಂಥಿಲ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಗ್ರಾಮದ ಯುವಕರು, ಜನರು ಸೇರಿಕೊಂಡು ಕಾಡಿಗೆ ಅಟ್ಟುವಲ್ಲಿ ಯಶ್ವಸಿಯಾಗಿದ್ದಾರೆ.

ಚಾಮರಾಜನಗರ

By

Published : Mar 18, 2019, 5:30 PM IST

ಚಾಮರಾಜನಗರ:ಆಹಾರ ಅರಸಿ ಗಡಿಭಾಗ ಯರಗನಹಳ್ಳಿಯ ಕಬ್ಬಿನ ಗದ್ದೆಗೆ ಬಂದಿದ್ದ ಒಂಟಿ ಸಲಗವನ್ನು ಟ್ರಾಕ್ಟರ್​ನಲ್ಲಿ ಚೇಸ್ ಮಾಡಿ ರೈತರು ಕಾಡಿಗಟ್ಟುವಲ್ಲಿ ಯಶ್ವಸಿಯಾಗಿದ್ದಾರೆ.

ಆಹಾರ, ನೀರು ಅರಸಿ ಸೆಂಥಿಲ್ ಎಂಬವರ ಕಬ್ಬಿನ ಗದ್ದೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ಇದರಿಂದ ಆತಂಕಗೊಂಡ ರೈತರು ಯುವಕರ ಜೊತೆ ಗೂಡಿ ಟ್ರಾಕ್ಟರ್​ನಲ್ಲಿ ಚೇಸ್ ಮಾಡಿ ಕಾಡಿಗೆ ಅಟ್ಟಿದ್ದಾರೆ.=

ಚಾಮರಾಜನಗರ

ಈ ಕುರಿತು ಸ್ಥಳೀಯರಾದ ನಾಗೇಂದ್ರ ಈಟಿವಿಯೊಂದಿಗೆ ಮಾತನಾಡಿ ಬೇಸಿಗೆ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಆನೆಗಳು ಹೊಲಗಳಿಗೆ ಲಗ್ಗೆಯಿಟ್ಟರೆ ಟ್ರ್ಯಾಕ್ಟರ್​​​,ಬೈಕ್​ನಲ್ಲಿ ಹಾರ್ನ್ ಮಾಡುತ್ತ ಕಾಡಿ ಗಟ್ಟುತ್ತೇವೆ ಅರಣ್ಯ ಇಲಾಖೆ ರೈಲ್ವೆ ಕಂಬಿಗಳನ್ನು ಅಳವಡಿಸಿ ನಾಡಿನತ್ತ ಕಾಡು ಪ್ರಾಣಿಗಳು ಬರುವುದನ್ನು ತಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details