ಚಾಮರಾಜನಗರ: ಕಬ್ಬು ತುಂಬಿದ ಲಾರಿಯೊಂದಕ್ಕೆ ಒಂಟಿ ಸಲಗವೊಂದು ಅಡ್ಡ ಹಾಕಿ ಕಬ್ಬು ತಿಂದಿರುವ ಘಟನೆ ಬೆಂಗಳೂರು-ದಿಂಬಂ ರಸ್ತೆಯ ಸತ್ಯಮಂಗಲ ಅರಣ್ಯಪ್ರದೇಶಕ್ಕೆ ಒಳಪಡುವ ಆಸನೂರು ಬಳಿ ನಡೆದಿದೆ.
ಕಬ್ಬಿನ ಲಾರಿ ಅಡ್ಡಗಟ್ಟಿದ ಗಜರಾಜ: ತಿನ್ಕಳಪ್ಪಾ ಅಂತಾ ಸುಮ್ಮನಾದ ಲಾರಿ ಚಾಲಕ! - undefined
ಕಬ್ಬಿನ ಲಾರಿಗೆ ರಸ್ತೆಬದಿ ನಿಂತಿದ್ದ ಒಂಟಿ ಸಲಗವೊಂದು ಅಡ್ಡ ಹಾಕಿ, ಕಬ್ಬು ತಿಂದಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
![ಕಬ್ಬಿನ ಲಾರಿ ಅಡ್ಡಗಟ್ಟಿದ ಗಜರಾಜ: ತಿನ್ಕಳಪ್ಪಾ ಅಂತಾ ಸುಮ್ಮನಾದ ಲಾರಿ ಚಾಲಕ!](https://etvbharatimages.akamaized.net/etvbharat/prod-images/768-512-3645940-thumbnail-3x2-chn.jpg)
ಕಬ್ಬಿನ ಲಾರಿಯನ್ನ ಅಡ್ಡಗಟ್ಟಿದ ಗಜರಾಜ
ರಾಜ್ಯದ ಗಡಿಭಾಗವಾದ ತಾಳವಾಡಿಯಿಂದ ಕಬ್ಬು ಹೊತ್ತೊಯ್ಯುತ್ತಿದ್ದ ಲಾರಿಗೆ ರಸ್ತೆಬದಿ ನಿಂತಿದ್ದ ಒಂಟಿ ಸಲಗ ಅಡ್ಡಹಾಕಿತ್ತು. ಕಬ್ಬಿಗಾಗಿ ಆನೆ ಅಡ್ಡ ಹಾಕಿದೆ ಎಂದರಿತ ಲಾರಿ ಚಾಲಕ ಕ್ಷಣಕಾಲ ಸುಮ್ಮನಾಗಿದ್ದ.
ಕಬ್ಬಿನ ಲಾರಿಯನ್ನ ಅಡ್ಡಗಟ್ಟಿದ ಗಜರಾಜ
ಲಾರಿಯನ್ನೆಲ್ಲಾ ಸುತ್ತು ಹಾಕಿ ಒಂದೊಂದೇ ಕಬ್ಬಿನ ಜಲ್ಲೆಯನ್ನು ಗಜರಾಜ ಅರ್ಧ ತಾಸಿಗೂ ಹೆಚ್ಚು ಕಾಲ ತಿಂದಿದ್ದಾನೆ. ಬಳಿಕ ಲಾರಿ ಚಾಲಕ ನಿಧಾನವಾಗಿ ಲಾರಿ ಚಾಲನೆ ಮಾಡುತ್ತಾ ಕಾಲ್ಕಿತ್ತಿದ್ದಾನೆ. ಸೊಂಡಿಲನ್ನು ಚಾಚಿ ಕಬ್ಬಿನ ಜಲ್ಲೆ ತಿನ್ನುತ್ತಿದ್ದ ಗಜರಾಜನನ್ನು ವಾಹನ ಸವಾರರು, ಸ್ಥಳೀಯರು ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.
Last Updated : Jun 24, 2019, 12:21 PM IST