ಚಾಮರಾಜನಗರ: ಓಂಕಾರ್ ಅರಣ್ಯ ವಲಯದಲ್ಲೊಂದು ಅವಘಡ ಸಂಭವಿಸಿದೆ. ಆಹಾರ ಅರಸಿ ಬಂದಿದ್ದ ಹೆಣ್ಣಾನೆಯೊಂದು ನೆಲಗಡಲೆ ತಿನ್ನಲು ಹೋಗಿ ಅಕ್ರಮ ವಿದ್ಯುತ್ಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಆಲತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಗನ್ನಾಥ್ ಎಂಬವರು ಬೆಳೆ ರಕ್ಷಣೆಗಾಗಿ ಅಳವಡಿಸಿದ್ದ ಅಕ್ರಮ ವಿದ್ಯುತ್ ಪ್ರವಹಿಸಿ ಹೆಣ್ಣಾನೆ ಮೃತಪಟ್ಟಿದ್ದು, ಆನೆಗೆ 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಗ್ರಾಮವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಗೆ ಬರಲಿದ್ದು, ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದಾರೆ.