ಕರ್ನಾಟಕ

karnataka

ETV Bharat / state

ಚಾಮರಾಜನಗರ: ಜಮೀನಿನಲ್ಲಿ ವಿದ್ಯುತ್​ ತಗುಲಿ ಕಾಡಾನೆ ಬಲಿ - elephant died by current shock

ಕುರುಬರ ಹುಂಡಿ ಗ್ರಾಮದ ದಾಸನಾಯ್ಕ ಎಂಬುವರ ಜಮೀನಿನಲ್ಲಿ ಅಂದಾಜು 16 ವರ್ಷದ ಗಂಡಾನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಜಮೀನು ಮಾಲೀಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

elephant died in gundlupete
ಅಕ್ರಮ ವಿದ್ಯುತ್​ಗೆ ಗಂಡಾನೆ ಬಲಿ‌.

By

Published : Oct 6, 2020, 12:18 PM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕುರುಬರ ಹುಂಡಿಯಲ್ಲಿ ಟೊಮ್ಯಾಟೊ ಬೆಳೆ‌ ರಕ್ಷಣೆಗೆ ಹಾಯಿಸಿದ್ದ ಅಕ್ರಮ ವಿದ್ಯುತ್​​ಗೆ ಗಂಡಾನೆ ಬಲಿಯಾಗಿದೆ.

ಅಕ್ರಮ ವಿದ್ಯುತ್​ಗೆ ಕಾಡಾನೆ ಬಲಿ‌

ಗ್ರಾಮದ ದಾಸನಾಯ್ಕ ಎಂಬುವರ ಜಮೀನಿನಲ್ಲಿ ಅಂದಾಜು 16 ವರ್ಷದ ಗಂಡಾನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಜಮೀನು ಮಾಲೀಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸತತ ಮಳೆಗೆ ಆನೆ ಕಂದಕ ಮುಚ್ಚಿಹೋಗಿರುವುದರಿಂದ ಆನೆಗಳು ದಾಂಗುಡಿ ಇಟ್ಟಿವೆ ಎನ್ನಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೇಗೂರು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು, ಸೆಸ್ಕ್ ಸಿಬ್ಬಂದಿ ಭೇಟಿ‌ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details