ಚಾಮರಾಜನಗರ :ಗಾಯಗೊಂಡಿದ್ದ ಮರಿಯಾನೆಯನ್ನು ಹುಲಿಯೊಂದು ಬೇಟೆಯಾಡಿ ತಿಂದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಲೊಕ್ಕೆರೆಯಲ್ಲಿ ನಡೆದಿದೆ.
ಗಾಯಗೊಂಡಿದ್ದ ಮರಿಯಾನೆ ಬೇಟೆಯಾಡಿದ ಹುಲಿ
ಇದು ಗಂಡು ಮರಿಯಾನೆ. 5ರಿಂದ 6 ವರ್ಷ ಎಂದು ಅಂದಾಜಿಸಲಾಗಿದೆ. ತಾಯಿ ಆನೆಯಿಂದ ಬೇರ್ಪಟ್ಟ ಬಳಿಕ ಗಾಯಗೊಂಡಿದ್ದು, ನಂತರ ಹುಲಿ ಬೇಟೆಯಾಡಿದೆ ಎಂದು ಈಟಿವಿ ಭಾರತಕ್ಕೆ ಸಿಎಫ್ಒ ಬಾಲಚಂದ್ರ ತಿಳಿಸಿದ್ದಾರೆ..
ಗಾಯಗೊಂಡಿದ್ದ ಮರಿಯಾನೆ ಬೇಟೆಯಾಡಿದ ಹುಲಿ
ಇದು ಗಂಡು ಮರಿಯಾನೆಯಾಗಿದ್ದು, 5ರಿಂದ 6 ವರ್ಷದಾಗಿದೆ ಎಂದು ಅಂದಾಜಿಸಲಾಗಿದೆ. ತಾಯಿ ಆನೆಯಿಂದ ಬೇರ್ಪಟ್ಟ ಬಳಿಕ ಗಾಯಗೊಂಡಿದ್ದು, ನಂತರ ಹುಲಿ ಬೇಟೆಯಾಡಿದೆ ಎಂದು ಈಟಿವಿ ಭಾರತಕ್ಕೆ ಸಿಎಫ್ಒ ಬಾಲಚಂದ್ರ ತಿಳಿಸಿದ್ದಾರೆ.
ಗಸ್ತಿನಲ್ಲಿದ್ದ ಸಿಬ್ಬಂದಿಗೆ ಆನೆ ಕಳೆಬರ ಕಾಣಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶನಿವಾರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.