ಕರ್ನಾಟಕ

karnataka

ETV Bharat / state

ಭರಚುಕ್ಕಿ ಜಲಪಾತದ ಸುತ್ತ ಆನೆ ಹಾವಳಿ..‌ ಮಕ್ಕಳ ಉದ್ಯಾನದ ಮೇಲೆ ನಿತ್ಯ ದಾಳಿ.. - Elephant attacks in Bharachukki falls in chamrajanagara

ಈ‌ ಹಿಂದೆ ಭರಚುಕ್ಕಿ ಜಲಪಾತ ಆವರಣದಲ್ಲಿ ಚಿರತೆಯೊಂದು ಆಗಾಗ ಭೇಟಿ ಕೊಟ್ಟು ಪ್ರವಾಸಿಗರನ್ನು ಆತಂಕಕ್ಕೆ ದೂಡಿತ್ತು. ಈಗ ಒಂಟಿ ಸಲಗವೊಂದು ನಿತ್ಯ ಬರುವ ಮೂಲಕ ಸಾಧನ-ಸಲಕರಣೆಗಳನ್ನ ಪುಡಿ ಪುಡಿ ಮಾಡುತ್ತಿರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ..

ಭರಚುಕ್ಕಿ
ಭರಚುಕ್ಕಿ

By

Published : May 23, 2022, 4:19 PM IST

ಚಾಮರಾಜನಗರ :ಮಳೆ ಆರ್ಭಟದಿಂದ ಭೋರ್ಗರೆದು ಧುಮ್ಮಿಕ್ಕುತ್ತಿರುವ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಸುತ್ತಮುತ್ತಲೂ ಆನೆ ಹಾವಳಿ ವಿಪರೀತವಾಗಿದೆ. ಸಂಜೆ 7 ಗಂಟೆ ಆದರೆ ಸಾಕು ಆನೆಯೊಂದು ಜಲಪಾತದ ವೀಕ್ಷಣಾ ಆವರಣಕ್ಕೆ ಬಂದು ನಿಲ್ಲುತ್ತಿದೆ.

ನಿತ್ಯ ಮಕ್ಕಳ ಉದ್ಯಾನದ ಮೇಲೆ ದಾಳಿ ಮಾಡುತ್ತಿದೆ. ಅಲ್ಲದೇ, ಜಾರುಬಂಡೆ, ತೂಗುಯ್ಯಾಲೆ ಸೇರಿದಂತೆ ಮಕ್ಕಳು ಆಟವಾಡುವ ಬಹುತೇಕ ಉಪಕರಣಗಳನ್ನು ಮುರಿದು ಹಾಕಿದೆ.

ಮಕ್ಕಳು ಆಟವಾಡುವ ಬಹುತೇಕ ಉಪಕರಣಗಳನ್ನು ಮುರಿದು ಹಾಕಿರುವ ಆನೆ

ಈ‌ ಹಿಂದೆ ಭರಚುಕ್ಕಿ ಜಲಪಾತ ಆವರಣದಲ್ಲಿ ಚಿರತೆಯೊಂದು ಆಗಾಗ ಭೇಟಿ ಕೊಟ್ಟು ಪ್ರವಾಸಿಗರನ್ನು ಆತಂಕಕ್ಕೆ ದೂಡಿತ್ತು. ಈಗ ಒಂಟಿ ಸಲಗವೊಂದು ನಿತ್ಯ ಬರುವ ಮೂಲಕ ಸಾಧನ-ಸಲಕರಣೆಗಳನ್ನ ಪುಡಿ ಪುಡಿ ಮಾಡುತ್ತಿರುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಕ್ಕಳು ಉದ್ಯಾನದಲ್ಲಿ ಆನೆ ದಾಳಿಯಿಂದ ಆಟದ ಸಲಕರಣೆಗಳು ಹಾನಿಗೊಳಗಾಗಿರುವುದು

ಪ್ರವಾಸಿಗರ ಸಂಖ್ಯೆ ಹೆಚ್ಚಳ : ಪೂರ್ವ ಮುಂಗಾರು ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ತಾಲೂಕಿನ ಭರಚುಕ್ಕಿ ಜಲಪಾತ ಧುಮ್ಮಿಕ್ಕುತ್ತಿದ್ದು, ಹಾಲಿನ ನೊರೆಯಂತೆ ಬೀಳುತ್ತಿರುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮಕ್ಕಳ ಆಟವಾಡುವ ಸಲಕರಣೆಗಳನ್ನು ಆನೆ ನಾಶ ಮಾಡಿರುವುದು

ಹೀಗಾಗಿ, ಕಬಿನಿ, ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಇದೆ. ಈ ಜಲಾಶಯಗಳಿಂದ ಬರುವ ಅಲ್ಪಸ್ವಲ್ಪ ನೀರಿನ ಜೊತೆಗೆ ಕೆರೆ-ಕಟ್ಟೆ, ಹಳ್ಳದ ನೀರು ಕಾವೇರಿ ನದಿಗೆ ಸೇರುತ್ತಿದೆ. ಇದರಿಂದ ನದಿ ನೀರಿನ ಹರಿವು ಬಿರುಸುಗೊಂಡಿದ್ದು, ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಧುಮ್ಮಿಕ್ಕುವ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಓದಿ:ಮಳಲಿ ಮಸೀದಿ ನವೀಕರಣ ವೇಳೆ ದೇವಾಲಯ ಶೈಲಿ ಪತ್ತೆ: ಮೇ 25ಕ್ಕೆ ತಾಂಬೂಲ ಪ್ರಶ್ನೆ

ABOUT THE AUTHOR

...view details