ಚಾಮರಾಜನಗರ: ಆನೆ ದಾಳಿಗೆ ದಾನಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ನಡೆದಿದೆ.
ಮಲ್ಲಯ್ಯನಹುಂಡಿ ಸಿದ್ದಯ್ಯ ಗಾಯಗೊಂಡ ವ್ಯಕ್ತಿ.
ಈತ ಕಲ್ಲುಕಟ್ಟೆ ಹಳ್ಳದ ಬಳಿ ದನ ಮೇಯಿಸುತ್ತಾ ಕುಳಿತಿದ್ದ. ಈ ವೇಳೆ ಬಳಿಗೆ ಬಂದ ಆನೆ ಈತನನ್ನು ಎತ್ತಿ ಬಿಸಾಡಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಜೊತೆಗೆ ಆನೆ ದಾಳಿಗೆ ಹಸು ಕೂಡಾ ಬಲಿಯಾಗಿದೆ. ಇದಾದ ಬಳಿಕ ಜಮೀನುಗಳ ಮಾರ್ಗದಲ್ಲೇ ಶಿವಪುರ ಸಮೀಪದ ಹಂಗಳಪುರಕ್ಕೆ ಆನೆ ತೆರಳಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಒಂಟಿ ಸಲಗನಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಮಧುಮಲೈ ಅರಣ್ಯ ಪ್ರದೇಶದಿಂದ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ.
ಕಳೆದ ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ನರಹಂತಕ ಹುಲಿ ಮತ್ತು ಚಿರತೆ ಸಾಕಷ್ಟುಜನರಿಗೆ ಉಪಟಳ ನೀಡಿದ್ದವು. ಈಗ ಗಜರಾಜನ ಅಟ್ಟಹಾಸದಿಂದ ಜನ ಹೈರಣಾಗಿದ್ದಾರೆ.