ಚಾಮರಾಜನಗರ: ವನ್ಯಜೀವಿಗಳ ಚಲನ ವಲನ ಅರಿಯದೇ ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ತಪ್ಪಲಿನಲ್ಲಿ ಜೀವವನ್ನೇ ತೆರುತ್ತಿದ್ದಾರೆ.
ಆನೆ ತುಳಿದು ಮಹಿಳೆ ಸಾವು: ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ 15 ದಿನದಲ್ಲಿ 3ನೇ ಬಲಿ! - malemahadeshwara betta
ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಆನೆ ದಾಳಿಗೆ ಇಂದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಕೇವಲ 15 ದಿನದಲ್ಲಿ ಈ ಪ್ರದೇಶದಲ್ಲಿ ಆನೆ ದಾಳಿಯಿಂದ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದೆ.
![ಆನೆ ತುಳಿದು ಮಹಿಳೆ ಸಾವು: ಮಾದಪ್ಪನ ಬೆಟ್ಟದ ತಪ್ಪಲಿನಲ್ಲಿ 15 ದಿನದಲ್ಲಿ 3ನೇ ಬಲಿ!](https://etvbharatimages.akamaized.net/etvbharat/prod-images/768-512-3898313-thumbnail-3x2-kvn.jpg)
ಹೌದು, ಆನೆ ದಾಳಿಗೆ ಮಹಿಳೆಯೊಬ್ಬರು ಮೃತಪಡುವ ಮೂಲಕ 15 ದಿನದ ಅವಧಿಯಲ್ಲಿ ಆನೆ ದಾಳಿಗೆ ಒಟ್ಟು ಮೂವರು ಮೃತಪಟ್ಟಿದ್ದಾರೆ. ಇಂಡಿಗನತ್ತ ಗ್ರಾಮದ ಗೌರಮ್ಮ(45) ಮೃತ ಮಹಿಳೆಯಾಗಿದ್ದು ತೋಕೆರೆಯಲ್ಲಿನ ಮಾರಿಯಮ್ಮ ದೇಗುಲದಿಂದ ಹಿಂತಿರುಗುವಾಗ ಏಕಾಏಕಿ ಆನೆಯೊಂದು ಭಕ್ತೆಯನ್ನು ತುಳಿದುಹಾಕಿರುವ ಘಟನೆ ದಟ್ಟಾರಣ್ಯದಲ್ಲಿ ನಡೆದಿದೆ.
ಈ ಸಂಬಂಧ ಮಾತನಾಡಿದ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕೊಂಡಲು, ತಾಳಬೆಟ್ಟ ಮತ್ತು ನಾಗಮಲೆ ಹಾಗೂ ಇಂದು ತೋಕೆರೆಯಲ್ಲಿ ನಡೆದ ಆನೆ ದಾಳಿಯಿಂದ ಒಟ್ಟು ಮೂವರು ಮೃತಪಟ್ಟಿದ್ದಾರೆ. ಭಕ್ತರ ಅಜ್ಞಾನದ ಕೊರತೆಯಿಂದ, ಪ್ರಾಣಿಗಳ ಚಲನವಲನ ತಿಳಿಯದಿದ್ದರಿಂದಲೇ ಈ ಅವಘಡಗಳಾಗಿದ್ದು ಕಾಲುದಾರಿ ಮೂಲಕ ದೇಗುಲಗಳಿಗೆ ಭೇಟಿ ನೀಡುವ ಭಕ್ತರು ಇಲಾಖೆ ಮತ್ತು ಸ್ಥಳೀಯ ಜನರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬೇಕು ಎಂದರು.