ಚಾಮರಾಜನಗರ:ತಪ್ಪಿಸಿಕೊಂಡಿದ್ದ ಹಸು ಹುಡುಕಲು ತೆರಳಿದ್ದ ವ್ಯಕ್ತಿಯೊಬ್ಬ ಆನೆದಾಳಿಗೆ ಬಲಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಗಲವಾಡಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ: ಹಸು ಹುಡಕಾಡಲು ತೆರಳಿದ್ದ ವ್ಯಕ್ತಿ ಆನೆ ದಾಳಿಗೆ ಬಲಿ - Chamrajnagar latest update news
ಕಾಡಂಚಿನಲ್ಲಿ ಮೇಯಲು ಬಿಟ್ಟಿದ್ದ ಹಸು ಹುಡುಕಾಟಕ್ಕೆ ತೆರಳಿದ್ದ ವ್ಯಕ್ತಿಯೋರ್ವ ಆನೆ ದಾಳಿಗೆ ಬಲಿಯಾಗಿದ್ದಾನೆ. ಚಾಮರಾಜನಗರ ತಾಲೂಕಿನ ಹೊಂಗಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆನೆ ದಾಳಿಗೆ ಬಲಿಯಾದ ವ್ಯಕ್ತಿ
ಗ್ರಾಮದ ಗುರುಸ್ವಾಮಿ(50) ಮೃತ ದುರ್ದೈವಿ. ಬುಧವಾರ ಸಂಜೆ ಮನೆಗೆ ಹಸು ಬಾರದಿದ್ದರಿಂದ ಡೈರಿಗೆ ಹಾಲು ಹಾಕಲು ತಡವಾಗುತ್ತದೆ ಎಂದು ಕಾಡಂಚಿನಲ್ಲಿ ಮೇಯಲು ಬಿಟ್ಟಿದ್ದ ಹಸು ಹುಡುಕಾಡುತ್ತಿರುವಾಗ ಆನೆಯೊಂದು ದಾಳಿ ಮಾಡಿ ಕೊಂದು ಹಾಕಿದೆ ಎನ್ನಲಾಗಿದೆ.
ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೆ.ಗುಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದೆ.