ಚಾಮರಾಜನಗರ: ಸಾವಿನ ಮನೆಗೆ ತೆರಳುತ್ತಿದ್ದವರ ಮೇಲೆ ಆನೆಯೊಂದು ದಾಳಿ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೂದಿಪಡಗ ಸಮೀಪದ ಕುಳ್ಳೂರಿನಲ್ಲಿ ನಡೆದಿದೆ.
ಸಾವಿನ ಮನೆಗೆ ಹೊರಟವರ ಮೇಲೆ ಒಂಟಿ ಸಲಗ ದಾಳಿ: ಇಬ್ಬರಿಗೆ ಗಂಭೀರ ಗಾಯ! - ಚಾಮರಾಜನಗರದಲ್ಲಿ ಆನೆ ದಾಳಿ: ಇಬ್ಬರಿಗೆ ಗಂಭೀರ ಗಾಯ
ಚಾಮರಾಜನಗರ ತಾಲೂಕಿನ ಬೂದಿಪಡಗ ಸಮೀಪದ ಕುಳ್ಳೂರಿನಲ್ಲಿ ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ.
ತಾಳವಾಡಿ ಹೊಸೂರು ಗ್ರಾಮದ ಪುಟ್ಟು, ಮಂಗಳಮ್ಮ ಹಾಗೂ ಮಹಾದೇವಿ ಗಾಯಗೊಂಡವರು. ಕುಳ್ಳೂರಿನಲ್ಲಿ ಸಂಬಂಧಿಕರೊಬ್ಬರು ತೀರಿಕೊಂಡಿದ್ದರಿಂದ ಮೂವರು ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿಯಿಂದ ಬಂದ ಸಲಗವೊಂದು ಏಕಾಏಕಿ ದಾಳಿ ನಡೆಸಿ ಬೈಕ್ ಜಖಂಗೊಳಿಸಿ, ಮೂವರಿಗೂ ಸೊಂಡಿಲಿನಿಂದ ಹೊಡೆದು ಕಾಲ್ಕಿತ್ತಿದೆ ಎಂದು ತಿಳಿದು ಬಂದಿದೆ
ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ವಿಷಯ ತಿಳಿದ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ, ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.