ಕರ್ನಾಟಕ

karnataka

ETV Bharat / state

ಗಜರಾಜ ಗರಂ.. ಫೋಟೋ ತೆಗೆಯುತ್ತಿದ್ದವರು ಜಸ್ಟ್‌ಮಿಸ್.. ಬೇಕೇನ್ರೀ ಇದೆಲ್ಲಾ..? - Kannada news

ಬಿಳಿ ಬಣ್ಣ ಹಸಿರಿನ ಮಧ್ಯೆ ಢಾಳಾಗಿ ಕಾಣುವುದರಿಂದ ಕೀಟಲೆ ಮಾಡಿದ ಪ್ರವಾಸಿಗರ ವೈಟ್ ಇನ್ನೋವಾ ಕಾರಿನ ಮೇಲೆ ದಾಳಿ ಮಾಡಿ ಗುದ್ದಿದೆ. ಅದೃಷ್ಟವಶಾತ್ ಕೊಂಚದರಲ್ಲೇ ಪ್ರವಾಸಿಗರು ಪಾರಾಗಿದ್ದಾರೆ.

ಗಜರಾಜ ಗರಂ

By

Published : Jul 14, 2019, 9:45 PM IST

ಚಾಮರಾಜನಗರ : ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಗಜಪಡೆಗೆ ಕೀಟಲೆ ಮಾಡಿದ ಪ್ರವಾಸಿಗರ ವಿರುದ್ದ ಗಜರಾಜ ಗರಂ ಆದ ಘಟನೆ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ.

ಗಜರಾಜ ಗರಂ... ಫೋಟೋ ತೆಗೆಯುತ್ತಿದ್ದವರು ಜಸ್ಟ್‌ಮಿಸ್

ರಸ್ತೆಬದಿ ನಿಂತಿದ್ದ ಗಜಪಡೆಯ ಫೋಟೋಗಳನ್ನು ಕ್ಲಿಕ್ಕಿಸಲು ಮುಂದಾದ ಪ್ರವಾಸಿಗರು ಕಾರಿನ ಮೇಲೆ ದಿಢೀರನೆ ಎಗರಿದ ಘಟನೆ ಇನ್ನಿತರ ವಾಹನ ಸವಾರರನ್ನು ಬೆಚ್ಚಿ ಬೀಳಿಸಿದೆ. ಬಿಳಿ ಬಣ್ಣ ಹಸಿರಿನ ಮಧ್ಯೆ ಢಾಳಾಗಿ ಕಾಣುವುದರಿಂದ ಕೀಟಲೆ ಮಾಡಿದ ಪ್ರವಾಸಿಗರ ವೈಟ್ ಇನ್ನೋವಾ ಕಾರಿನ ಮೇಲೆ ದಾಳಿ ಮಾಡಿ ಗುದ್ದಿದೆ. ಅದೃಷ್ಟವಶಾತ್ ಕೊಂಚದರಲ್ಲೇ ಪ್ರವಾಸಿಗರು ಪಾರಾಗಿದ್ದು, ಪ್ರವಾಸಕ್ಕೆ ತೆರಳಿದ್ದ ಕೊಳ್ಳೇಗಾಲದ ಯುವಕರು ವಿಡಿಯೋ ಸೆರೆ ಹಿಡಿದು ಈಟಿವಿ ಭಾರತಕ್ಕೆ ನೀಡಿದ್ದಾರೆ.

ABOUT THE AUTHOR

...view details