ಕರ್ನಾಟಕ

karnataka

ETV Bharat / state

ಚಾಮರಾಜನಗರ ನಗರಸಭೆ: ಕುತೂಹಲ ಕೆರಳಿಸಿದ ಬಿಜೆಪಿ ಆಂತರಿಕ ಫೈಟ್!!

ಬಿಜೆಪಿಗೆ ಬಿಎಸ್ಪಿಯಿಂದ ಗೆದ್ದಿರುವ ಪ್ರಕಾಶ್(ಶಾಸಕ ಮಹೇಶ್ ಬೆಂಬಲಿತ ) ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದ್ದು, ಸಂಸದರ ಮತವೂ ಸೇರಿಕೊಳ್ಳುವುದರಿಂದ ಕಮಲದ ಹಾದಿ ಸುಗಮವಾಗಲಿದೆ.

Election of Chamarajanagar Municipal Council
ಬಿಜೆಪಿಯ ಮಮತಾ ಬಾಲಸುಬ್ರಹ್ಮಣ್ಯ

By

Published : Oct 30, 2020, 9:22 PM IST

ಚಾಮರಾಜನಗರ:ಇದೇ ನವೆಂಬರ್ 2 ರಂದು ಚಾಮರಾಜನಗರ ನಗರಸಭೆ ಅಧ್ಯಕ್ಷ ಗಾದಿ ಚುನಾವಣೆ ನಡೆಯಲಿದ್ದು, ಬಿಜೆಪಿಯ ಮಮತಾ ಬಾಲಸುಬ್ರಹ್ಮಣ್ಯ ಹಾಗೂ ಆಶಾ ನಟರಾಜು ನಡುವೆ ಪಟ್ಟಕ್ಕಾಗಿ ಭಾರೀ ಕಸರತ್ತು ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ.ವರ್ಗದ ಮಹಿಳೆಗೆ ಮೀಸಲಾಗಿದ್ದು, ಒಟ್ಟು 31 ಸ್ಥಾನಗಳಲ್ಲಿ ಬಿಜೆಪಿ -15, ಕಾಂಗ್ರೆಸ್-8, ಎಸ್ಡಿಪಿಐ-6, ಬಿಎಸ್ಪಿ ಹಾಗೂ ಪಕ್ಷೇತರ ತಲಾ 1 ಸ್ಥಾನ ಗೆದ್ದಿದ್ದು, ಬಹುಮತಕ್ಕೆ ಬಿಜೆಪಿಗೆ ಒಂದೇ ಒಂದು ಅಗತ್ಯವಿದ್ದು, ಸಂಸದ ಹಾಗೂ ಶಾಸಕರಿಗೂ ಮತದಾನದ ಹಕ್ಕಿದೆ.

ಬಿಜೆಪಿಗೆ ಬಿಎಸ್ಪಿಯಿಂದ ಗೆದ್ದಿರುವ ಪ್ರಕಾಶ್ (ಶಾಸಕ ಮಹೇಶ್ ಬೆಂಬಲಿತ ) ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದ್ದು, ಸಂಸದರ ಮತವೂ ಸೇರಿಕೊಳ್ಳುವುದರಿಂದ ಕಮಲದ ಹಾದಿ ಸುಗಮವಾಗಲಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರ ಹಿಡಿಯಬೇಕಿದ್ದಲ್ಲಿ ಎಸ್ಡಿಪಿಐ, ಬಿಎಸ್ಪಿ ಹಾಗೂ ಪಕ್ಷೇತರ ಸದಸ್ಯ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದು ದೂರದ ಮಾತಾಗಿದೆ‌. ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಪತ್ನಿ ಮಮತಾ ಹಾಗೂ ಆಶಾ ನಟರಾಜು ನಡುವೆ ಅಧ್ಯಕ್ಷ ಪದವಿಗೆ ಭಾರಿ ಪೈಪೋಟಿ ನಡೆಯುತ್ತಿದ್ದು, ಇಂದು ಸದಸ್ಯರ ಜೊತೆಗೆ ಒಂದು ಹಂತದ ಮಾತುಕತೆ ನಡೆದಿದ್ದರೂ ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ.

ವರಿಷ್ಠರ ಅಂಗಲದಲ್ಲಿ ಚೆಂಡಿದ್ದು, ಆಶಾ ನಟರಾಜು ಹಾಗೂ ಮಮತಾ ಬಾಲಸುಬ್ರಹ್ಮಣ್ಯಂ ಇಬ್ಬರಲ್ಲಿ ಯಾರು ಆಯ್ಕೆಯಾಗಲಿದ್ದಾರೆ, ಚುನಾವಣೆ ವೇಳೆ ಹೈಡ್ರಾಮಗಳು ಏರ್ಪಡುವ ಕುರಿತು ಕುತೂಹಲ ಗರಿಗೆದರಿದೆ. ಮಮತಾ ಅವರಿಗೆ ಪಟ್ಟ ಕಟ್ಟಲು ಸಾಕಷ್ಟು ಲಾಬಿ ನಡೆದಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಸುಧಾ ಅವರು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.

ABOUT THE AUTHOR

...view details