ಚಾಮರಾಜನಗರ:ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯಾಗಿ ಚಾಮರಾಜನಗರ ಎಎಸ್ಪಿ ಕೆ.ಎಸ್ ಸುಂದರ್ ರಾಜ್ ಅವರನ್ನು ನೇಮಕ ಮಾಡಲಾಗಿದೆ.
ಸಿದ್ದರಾಮಯ್ಯ ಭೇಟಿ ವೇಳೆ ಯಾರಿಂದ ತಪ್ಪಾಗಿದೆ?, ಯಾರಿಂದ ಕರ್ತವ್ಯ ಲೋಪವಾಗಿದೆ ಹಾಗೂ ಅಹಿತಕರ ಘಟನೆ ಹಿಂದೆ ಯಾರಿದ್ದಾರೆ? ಎಂಬ ಸಮಗ್ರ ತನಿಖೆಯನ್ನು ಸುಂದರ್ ರಾಜ್ ನಡೆಸಲಿದ್ದು, ಶೀಘ್ರವೇ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.