ಕರ್ನಾಟಕ

karnataka

ETV Bharat / state

‘ಮೇಸ್ಟ್ರಾದ ಮಿನಿಸ್ಟರ್’ - ಮಕ್ಕಳಿಂದ ಮಗ್ಗಿ ಒಪ್ಪಿಸಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್ - Suresh Kumar visits Chamarajanagar schools

ಕೊರೊನಾಗೆ ಭಯಪಡದೇ ಎಚ್ಚರಿಕೆ ವಹಿಸಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಚಿವ ಸುರೇಶ್ ಕುಮಾರ್ ಮಕ್ಕಳಿಗೆ ಧೈರ್ಯ ತುಂಬಿದರು.

education-minister-suresh-kumar-visits-chamarajanagar-schools
ಮಕ್ಕಳಿಂದ ಮಗ್ಗಿ ಒಪ್ಪಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್

By

Published : Jan 12, 2021, 11:36 AM IST

ಚಾಮರಾಜನಗರ:ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಬೆಳಗ್ಗೆ ಚಾಮರಾಜನಗರ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಮಕ್ಕಳಿಂದ ಮಗ್ಗಿ ಒಪ್ಪಿಸಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್

ಮೊದಲಿಗೆ ನಲ್ಲೂರು ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಸಚಿವರು ಮತ್ತು ಅಧಿಕಾರಿಗಳಿಗೆ ಮಕ್ಕಳು, ಶಿಕ್ಷಕರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಇದೇ ವೇಳೆ, ಕೊರೊನಾಗೆ ಭಯಪಡದೇ ಎಚ್ಚರಿಕೆ ವಹಿಸಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಧೈರ್ಯ ತುಂಬಿದರು.

ಇದನ್ನೂ ಓದಿ:ಬಸ್​​ ನಿಲ್ಲಿಸದೆ ವಿದ್ಯಾರ್ಥಿಗಳಿಗೆ ಸಮಸ್ಯೆ: ಸಾರಿಗೆ ಸಚಿವರಿಗೆ ಪತ್ರ ಬರೆದ ಶಿಕ್ಷಣ ಸಚಿವ

ಇದಾದ ಬಳಿಕ, ವಿದ್ಯಾರ್ಥಿಗಳಿಂದ 7 ನೇ ಮಗ್ಗಿ ಹೇಳಿಸಿ 6 ನೇ ಮಗ್ಗಿಯನ್ನು ಉಲ್ಟಾ ಹೇಳುವಂತೆ ಉತ್ತೇಜಿಸಿದರು. ಮಕ್ಕಳು ಸಹ ಸಚಿವರ ಟಾಸ್ಕ್ ಅ​ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಶಾಲೆಗೆ ಎಂದಿನಿಂದ ಬರುತ್ತೀದ್ದೀರಿ, ಆರೋಗ್ಯ ಹೇಗಿದೆ ಎಂದು ಪ್ರಶ್ನೆಗಳನ್ನು ಕೇಳಿ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದರು.

For All Latest Updates

TAGGED:

ABOUT THE AUTHOR

...view details