ಚಾಮರಾಜನಗರ:ಶ್ರೀಮಂತ ಮಕ್ಕಳು ಓದುವ ಶಾಲೆಗಳಲ್ಲಿ ತಿನ್ನುವ ಐಸ್ ಕ್ರೀಂ ಮತ್ತು ಹಣ್ಣುಗಳಿಗೆ ಡ್ರಗ್ ಸವರುತ್ತಿರುವ ಗುಮಾನಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಫೋಟಕ ಮಾಹಿತಿಯನ್ನು ಹೊರಗೆಡವಿದ್ದಾರೆ.
ಮಕ್ಕಳು ತಿನ್ನುವ ಐಸ್ ಕ್ರೀಂಗೂ ಡ್ರಗ್ ಸವರುತ್ತಿರುವ ಗುಮಾನಿಯಿದೆ: ಸಚಿವ ಸುರೇಶ್ ಕುಮಾರ್ - ಡ್ರಗ್ಸ್ ಮಾಫಿಯ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ
ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳು ತಿನ್ನುವ ಐಸ್ ಕ್ರೀಂ ಮತ್ತು ಹಣ್ಣು ಹಂಪಲುಗಳ ಮೇಲೆ ಡ್ರಗ್ಸ್ ಸವರುತ್ತಿರುವ ಗುಮಾನಿಯಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವ ಜನತೆಯನ್ನ ಹಾಳು ಮಾಡುವ ಜನರನ್ನು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ಸಮಾಜ ಹಾಗೂ ಯುವ ಜನಾಂಗವನ್ನ ದುರ್ಬಲ ಮಾಡುವ ಪ್ರಯತ್ನ. ಇದನ್ನ ಬೇರು ಸಮೇತವಾಗಿ ಕಿತ್ತು ಹಾಕಬೇಕು ಎಂದರು.
ಯುವ ಜನತೆ ಡ್ರಗ್ಸ್ಗೆ ಬಲಿಯಾಗುವುದನ್ನ ಸಮಾಜ ಸಹಿಸುವುದಿಲ್ಲ. ಮೂರು ವರ್ಷದ ಹಿಂದೆಯೇ ಈ ಬಗ್ಗೆ ಬಿಜೆಪಿ ಧ್ವನಿ ಎತ್ತಿದೆ. ನಮ್ಮ ಜಿಲ್ಲೆಯಲ್ಲೂ ಕೂಡ ಡ್ರಗ್ಸ್ ಪಿಡುಗಿನ ಮೂಲ ಹುಡುಕಿ ಕೊನೆಗಾಣಿಸುತ್ತೇವೆ ಎಂದು ಸಚಿವ ಸುರೇಶ್ಕುಮಾರ್ ಹೇಳಿದ್ರು.
TAGGED:
ಸಚಿವ ಸುರೇಶ್ ಕುಮಾರ್ ಹೇಳಿಕೆ