ಚಾಮರಾಜನಗರ: ಸಿದ್ದರಾಮಯ್ಯ ಮತ್ತೇ ಸಿಎಂ ಆಗುವುದು ಕನಸಿನ ಮಾತು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಕುಟುಕಿದರು.
ಸಿದ್ದರಾಮಯ್ಯ ಸಿಎಂ ಆಗುವುದು ಕನಸಿನ ಮಾತು: ಸಂಸದ ವಿ.ಶ್ರೀ - ಚಾಮರಾಜನಗರ ಜಿಲ್ಲೆ ಸುದ್ದಿ
ಚುನಾವಣೆಗೆ ಇನ್ನು ಎರಡೂವರೆ ವರ್ಷವಿದೆ. ಈಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಸಂಸದ ವಿ.ಶ್ರೀನಿವಾಸಪ್ರಸಾದ್
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚುನಾವಣೆಗೆ ಇನ್ನು ಎರಡೂವರೆ ವರ್ಷವಿದೆ. ಈಗಲೇ ಅವರು ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ಅವರು ಮತ್ತೆ ಸಿಎಂ ಕನಸಿನ ಮಾತು ಎಂದು ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆಂಬ ಮಾತುಗಳಿಗೆ ವ್ಯಂಗ್ಯವಾಡಿದ್ದಾರೆ.
ಯಾವ ಸಿಎಂ ಕೂಡ ಎರಡು ಕಡೆ ಸ್ಪರ್ಧೆ ಮಾಡಲ್ಲ. ಬಾದಾಮಿಯಲ್ಲಿ 1600 ಮತದಿಂದ ಗೆಲ್ಲದಿದ್ದರೇ ಎಚ್.ಸಿ.ಮಹಾದೇವಪ್ಪ, ಧ್ರುವನಾರಯಣ ರೀತಿ ಎಲ್ಲಾದರೂ ಅವಿತುಕೊಳ್ಳುತ್ತಿದ್ದರು. ಅತ್ತು ಕರೆದು ವಿರೋಧ ಪಕ್ಷದ ನಾಯಕರಾಗಿದ್ದು, ಆ ಕೆಲಸ ಮಾಡಿಕೊಂಡು ಹೋಗಲಿ ಎಂದರು.