ಚಾಮರಾಜನಗರ:ಗ್ರಾಮೀಣ ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯಲ್ಲಿ 5 ದಶಕಗಳಿಂದ ತೊಡಗಿಸಿಕೊಂಡಿರುವ ವೆಂಕಟರಮಣಸ್ವಾಮಿ 2020ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ನಾರದ, ಕೃಷ್ಣನಾಗಿ ಮಿಂಚಿದ ಗಡಿಜಿಲ್ಲೆ ವೆಂಕಟರಮಣಸ್ವಾಮಿಗೆ ನಾಟಕ ಅಕಾಡೆಮಿ ಪ್ರಶಸ್ತಿ - Venkataramanaswamy
ದಸರಾ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು ಜಾತ್ರೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಇವರು ಗಾನ, ಕಹಳೆಯಲ್ಲೂ ಪಾರಮ್ಯ ಮೆರೆದಿದ್ದಾರೆ.
ವೆಂಕಟರಮಣಸ್ವಾಮಿಗೆ ನಾಟಕ ಅಕಾಡೆಮಿ ಪ್ರಶಸ್ತಿ
ಚಾಮರಾಜನಗರದ ಅಂಬೇಡ್ಕರ್ ಬಡಾವಣೆ ನಿವಾಸಿಯಾಗಿರುವ ವೆಂಕಟರಮಣಸ್ವಾಮಿ ಅವರಿಗೆ 70 ವರ್ಷ ತುಂಬಿದ್ದು, ಈಗಲೂ ನಾಟಕಗಳು ಎಂದರೆ ಯುವಕನಂತೆ ಆಸಕ್ತಿ ತೋರುತ್ತಾರೆ. ಕೃಷ್ಣ, ನಾರದ ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿರುವ ಇವರು ದಕ್ಷಯಜ್ಞ, ಕುರುಕ್ಷೇತ್ರ, ದಾನಶೂರ ಕರ್ಣ ಹಾಗೂ ಸಾಮಾಜಿಕ ನಾಟಕಗಳಲ್ಲೂ ಬಣ್ಣ ಹಚ್ಚಿದ್ದಾರೆ.
ದಸರಾ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು ಜಾತ್ರೆಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಇವರು ಗಾನ, ಕಹಳೆಯಲ್ಲೂ ಪಾರಮ್ಯ ಮೆರೆದಿದ್ದಾರೆ.