ಚಾಮರಾಜನಗರ:ಪ್ರತಿ ಭೀಮನ ಅಮಾವಾಸ್ಯೆ ಬಂತೆಂದರೆ ಚಿತ್ರ ಪ್ರೇಮಿಗಳು ಮರುಗುತ್ತಾರೆ. ಇದಕ್ಕೆ ಕಾರಣ ಕನ್ನಡದ ವರನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣ. ಈ ದಿನದಂದೇ ಕಾಡುಗಳ್ಳ ವೀರಪ್ಪನ್ ನಟ ಸಾರ್ವಭೌಮನನ್ನು ಅಪಹರಿಸಿದ್ದ.
ಭೀಮನ ಅಮಾವಾಸ್ಯೆ: ಅಂದು ಡಾ. ರಾಜ್ ಅಪಹರಣ, ಇಂದು ಸಿದ್ಧಾರ್ಥ್ ಮರಣ! - cafe coffee day
ಪ್ರತಿ ಭೀಮನ ಅಮಾವಾಸ್ಯೆ ದಿನ ಚಿತ್ರ ಪ್ರೇಮಿಗಳು ಮರುಗುತ್ತಾರೆ. ಇದಕ್ಕೆ ಕಾರಣ ಕನ್ನಡದ ಮೇರು ನಟ ಡಾ. ರಾಜ್ಕುಮಾರ್ ಅವರ ಅಪಹರಣ ಆಗಿದ್ದು ಅದೇ ದಿನದಂದು. ಅಲ್ಲದೇ ಕಾಫಿ ಕಿಂಗ್ ಎಂದೇ ಹೆಸರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಕೂಡ ಶವವಾಗಿ ಪತ್ತೆಯಾಗಿದ್ದು ಕೂಡ ಭೀಮನ ಅಮಾವಾಸ್ಯೆಯೆಂದೇ.
![ಭೀಮನ ಅಮಾವಾಸ್ಯೆ: ಅಂದು ಡಾ. ರಾಜ್ ಅಪಹರಣ, ಇಂದು ಸಿದ್ಧಾರ್ಥ್ ಮರಣ!](https://etvbharatimages.akamaized.net/etvbharat/prod-images/768-512-4002266-thumbnail-3x2-bngajpg.jpg)
2000ನೇ ಇಸವಿಯ ಜು. 30ರಂದು ದೊಡ್ಡಗಾಜನೂರಿನ ತೋಟದ ಮನೆಯಿಂದ ಕಾಡುಗಳ್ಳ ವೀರಪ್ಪನ್ ರಾಜ್ಕುಮಾರ್ ಅವರನ್ನು ಅಪಹರಿಸಿ ಬರೋಬ್ಬರಿ 108 ದಿನಗಳು ಕಾಡಿನಲ್ಲಿರಿಸಿಕೊಂಡಿದ್ದ. ತಾಳವಾಡಿಯ ತೋಟದ ಮನೆಯಲ್ಲಿ ಆಗಷ್ಟೆ ಊಟ ಮುಗಿಸಿ ವಿರಮಿಸುತ್ತಿದ್ದವರನ್ನು ವೀರಪ್ಪನ್ ನೇತೃತ್ವದ ತಂಡ ಅಪಹರಿಸಿದ್ದ ಕಾರಣ ಭೀಮನ ಅಮಾವಾಸ್ಯೆ ಚಿತ್ರ ಪ್ರೇಮಿಗಳ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ.
ಇಂದು ಸಿದ್ದಾರ್ಥ್ ಸಾವು:
ಕಾಫಿ ಕಿಂಗ್ ಎಂದೇ ಹೆಸರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಕೂಡ ಶವವಾಗಿ ಪತ್ತೆಯಾಗಿದ್ದು ಕೂಡ ಭೀಮನ ಅಮಾವಾಸ್ಯೆಯೆಂದೇ. ಕನ್ನಡಿಗರು ಭೀಮನ ಅಮಾವಾಸ್ಯೆ ಹಬ್ಬದ ವೇಳೆ ಕ್ಷಣ ಕ್ಷಣ ಮರುಗುವವಂತಾಗಿದೆ. ಇನ್ನು ಅಂದಿನ ರಾಜ್ ಅಪಹರಣದ ಹೊತ್ತಿನಲ್ಲಿ ಎಸ್.ಎಂ.ಕೃಷ್ಣ ಕರ್ನಾಟಕದ ಸಿಎಂ ಆಗಿದ್ದರು. ಇಂದು ಸಾವನ್ನಪ್ಪಿದ ಕಾಫಿ ಕಿಂಗ್ ಸಿದ್ಧಾರ್ಥ್ ಅವರ ಮಾವ ಎಸ್ಎಂಕೆ ಆಗಿರುವುದು ಕೂಡ ಕಾಕಾತಾಳೀಯ.