ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ದಿನಾಚರಣೆ ವೇಳೆ ಕೊರೊನಾ ತಡೆಗೆ ಪ್ರತಿಜ್ಞೆ: ಮನೆ‌ ಮನೆಗೆ ಸಿಹಿ ವಿತರಣೆ - Dr. B.R. Ambedkar Jayanti celebration

ಕೊಳ್ಳೇಗಾಲ‌ ಪಟ್ಟಣದ ಭೀಮನಗರ ಸಾವಿತ್ರಿಬಾಫುಲೆ ಸಭಾಂಗಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ಪ್ರತಿಜ್ಞೆಯ ಮೂಲಕ ಆಚರಿಸಲಾಯಿತು.

Dr. B.R. Ambedkar Jayanti celebration
ಕರೊನಾ ತಡೆಗೆ ಪ್ರತಿಜ್ಞೆ

By

Published : Apr 14, 2020, 12:48 PM IST

ಕೊಳ್ಳೇಗಾಲ: ಕೊಳ್ಳೇಗಾಲ‌ ಪಟ್ಟಣದ ಭೀಮನಗರ ಸಾವಿತ್ರಿಬಾಫುಲೆ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿಯನ್ನು ಕೊರೊನಾ ವಿರುದ್ಧ ಪ್ರತಿಜ್ಞೆ ಮಾಡುವುದರ ಮೂಲಕ ವಿಶೇಷವಾಗಿ ಆಚರಿಸಿದರು.

ಭೀಮನಗರ ವಾರ್ಡ್‌ನ ಸದಸ್ಯೆ ರೇಖಾ ರಮೇಶ್ ಮಾತನಾಡಿ, ಕೊರೊನಾ ತಡೆಗಟ್ಟುವಿಕೆಗೆ ಸರ್ಕಾರದ ಜೊತೆಗೆ ಕೈಜೋಡಿಸೋಣ. ಎಲ್ಲರೂ ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳೋಣ ಎಂದು ಸಲಹೆ ನೀಡಿದರು.

ಅಂಬೇಡ್ಕರ್ ದಿನಚಾರಣೆಯಲ್ಲಿ ಕೊರೊನಾ ತಡೆಗೆ ವಿಶೇಷ ಪ್ರತಿಜ್ಞೆ

ಅಂಬೇಡ್ಕರ್ ಸ್ಮಾರಕ ಸಂಘಧ ಅಧ್ಯಕ್ಷ ನಟರಾಜ್ ಮಾತನಾಡಿ, ಕೊರೊನಾ ಮಹಾಮಾರಿ ದೇಶದ ಜನರ ನಿದ್ದೆ‌ಕೆಡಿಸಿದೆ. ಸರ್ಕಾರ ಕೊರೊನಾ ತಡೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಬಾಬಾ ಸಾಹೇಬರ 129 ನೇ ಜಯಂತಿ‌ ಕಾರ್ಯಕ್ರಮದಲ್ಲಿ ಕೊರೊನಾ ಮುಕ್ತ ದೇಶ ಮಾಡಲು ಪ್ರತಿಜ್ಞೆ ಮಾಡೋಣ ಎಂದು ಕರೆ ಕೊಟ್ಟರು.

ನಂತರ ಪೊಲೀಸ್ ಅಧಿಕಾರಿಗಳು ಮನೆಮನೆಗೆ ಸಿಹಿ ಹಂಚಿದರು.

ABOUT THE AUTHOR

...view details