ಚಾಮರಾಜನಗರ:ಜಿಲ್ಲೆಯು ಕೊರೊನಾ ಮುಕ್ತವಾಗಿದ್ದು, ಕೊರೊನಾ ಬಗ್ಗೆ ಆತಂಕ ಬೇಡ. ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಕೊರೊನಾ ಬಗ್ಗೆ ಆತಂಕ ಬೇಡ, ಲಕ್ಷಣಗಳಿದ್ರೆ ಪರೀಕ್ಷೆ ಮಾಡಿಸಿಕೊಳ್ಳಿ.. ಸಚಿವ ಸುರೇಶ್ ಕುಮಾರ್
ಕೊಳ್ಳೇಗಾಲದಲ್ಲಿ ಕೊರೊನಾ ತಡೆಗಟ್ಟುವಿಕೆ ಹಾಗೂ ಲಾಕ್ಡೌನ್ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಚಿವ ಸುರೇಶ್ ಕುಮಾರ್,ಕೊರೊನಾ ಬಗ್ಗೆ ಆತಂಕ ಬೇಡ. ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಾರೆ.
ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ತಡೆಗಟ್ಟುವಿಕೆ ಹಾಗೂ ಲಾಕ್ಡೌನ್ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ್ರು. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸೂಚನೆಯಂತೆ ಕೊರೊನಾ ಮುಕ್ತ ಜಿಲ್ಲೆಯಲ್ಲೂ ಸಹ ಸಿವಿಯರ್ ಅಕ್ಯೂಟ್ ರೆಸ್ಪಿರೇಟ್ರಿ ಇಲ್ನೆಸ್ನಿಂದ ( ಉಸಿರಾಟದ ತೊಂದರೆ) ಬಳಲುತ್ತಿರುವರಿಗೂ ಚಿಕಿತ್ಸೆಗೆ ಒಳಪಡಿಸಬೇಕೆಂಬ ಸೂಚನೆಯಿದೆ. ಮೊದಲ ಮೂರು ದಿನಗಳಲ್ಲಿ ಪ್ರತಿದಿನ 100 ಮಂದಿಯ ಸ್ಯಾಂಪಲ್ಸ್ ಕಳುಹಿಸಿಕೊಡುವ ಕಾರ್ಯವನ್ನ ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು.
ಇನ್ನು, ಕೊರೊನಾ ಬಗ್ಗೆ ಆತಂಕ ಬೇಡ, ಭಯದಿಂದ ಬೇರೆ ಸಮಸ್ಯೆಗೆ ತುತ್ತಾಗುವ ಸಂಭವ ಹೆಚ್ಚಿದೆ. ಕೊರೊನಾ ಜೀವನದ ಕೊನೆಯಲ್ಲ. ಸೊಂಕಿನಿಂದ ಗುಣಮುಖವಾದರ ಸಂಖ್ಯೆ ಅಧಿಕವಾಗಿದೆ. ಇದರಿಂದ ಗಾಬರಿಯಾಗುವುದು ಬೇಡ ಎಂದು ಜಿಲ್ಲೆಯ ಜನರಿಗೆ ಸಲಹೆ ನೀಡಿದ್ದಾರೆ.