ಚಾಮರಾಜನಗರ: ನನಗೆ 71, ಅವನಿಗೆ 46. ನಾನು 7 ಬಾರಿ ಎಂಎಲ್ಎ ಆಗಿದ್ದೀನಿ. ಆತ ಇನ್ನೂ ಒಂದು ಸಾರಿನೂ ಎಂಎಲ್ಎ ಆಗಿಲ್ಲ. ಹಾಗಾಗಿ, ಯಾಕೆ ಹೋಲಿಸುತ್ತೀರಾ? ಎಂದು ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.
ನೀವು ಹಾಗೂ ವಿಜಯೇಂದ್ರ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪರೋಕ್ಷವಾಗಿ ಬಿಎಸ್ವೈ ಪುತ್ರನಿಗೆ ಟಾಂಗ್ ಕೊಟ್ಟು ಪ್ರತಿಕ್ರಿಯಿಸಿದ ಸೋಮಣ್ಣ, 'ಮೊದಲು ಎಂಎಲ್ಎ ಆಗಲಿ. ಬಹಳಷ್ಟು ಪುಣ್ಯಾತ್ಮರು ದೇಶಕ್ಕಾಗಿ, ಪಕ್ಷಕ್ಕಾಗಿ ದುಡಿದವರಿದ್ದಾರೆ. ಅವರ ಮುಂದೆ ನಾವು ಗೌಣ ಹಾಗೂ ನಿಮಿತ್ತ ಮಾತ್ರ' ಎಂದರು.
ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಎಲ್ಲವನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೊದಲು 2023 ಮೇ ಬರಲಿ. ಅದಾದ ನಂತರ ವಿಜಯೇಂದ್ರಗೆ ಟಿಕೆಟ್ ಕೊಡಬೇಕು. ಬಳಿಕ ಅವರು ಗೆದ್ದು ಬರಬೇಕು' ಎಂದು ಹೇಳಿದರು.
ಆರ್ಎಸ್ಎಸ್ ವಿರುದ್ಧದ ವಾಗ್ದಾಳಿ ಮತ್ತು ಟೀಕೆಗಳ ಬಗ್ಗೆ ಮಾತನಾಡುತ್ತಾ, 'ಆರ್ಎಸ್ಎಸ್ ದೇಶದ ದೊಡ್ಡ ಸಂಘಟನೆಯಾಗಿದ್ದು ತ್ಯಾಗ, ದೇಶದ ಅಭಿವೃದ್ಧಿ, ದೂರದೃಷ್ಟಿಯ ಚಿಂತನೆ ಹೊಂದಿದೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು. ಅನವಶ್ಯಕವಾಗಿ ಟೀಕಿಸುವವರು ಸಂಘಟನೆಯ ಬಗ್ಗೆ ಸ್ವಲ್ಪ ಅರಿಯಲಿ' ಎಂದರು.
ಇದನ್ನೂಓದಿ:ರಾಜ್ಯಸಭೆ ಚುನಾವಣೆ: ನಾಳೆ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ