ಕೊಳ್ಳೇಗಾಲ: ಜೀವನದಲ್ಲಿ ಜಿಗುಪ್ಸೆಗೊಂಡು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಪಟ್ಟಣದ ಶಿವಕುಮಾರಸ್ವಾಮಿ ಬಡಾವಣೆ ನಿವಾಸಿ ನಿವೃತ್ತ ಕಂದಾಯ ಇಲಾಖೆಯ ನೌಕರ ಕೆಂಪೇಗೌಡ ಎಂಬುವರ ಮಗಳು ಆಶಾರಾಣಿ (35) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ.
ಜೀವನದಲ್ಲಿ ಜಿಗುಪ್ಸೆಗೊಂಡು ವೈದ್ಯನ ಪತ್ನಿ ಆತ್ಮಹತ್ಯೆ - doctor's wife commits suicide
ಪಟ್ಟಣದ ಶಿವಕುಮಾರಸ್ವಾಮಿ ಬಡಾವಣೆ ನಿವಾಸಿ ನಿವೃತ್ತ ಕಂದಾಯ ಇಲಾಖೆಯ ನೌಕರ ಕೆಂಪೇಗೌಡ ಎಂಬುವರ ಮಗಳು ಆಶಾರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಕೆಗೆ ನರಸೀಪುರ ಪಟ್ಟಣದಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದ ವೈದ್ಯನ ಶಿವರಾಜು ಎಂಬುವರ ಪತ್ನಿಯಾಗಿದ್ದು, ಇವರಿಗೆ ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಈ ಸಂಬಂಧ ಮೃತಳ ತಂದೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ಮಗಳಿಗೆ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಕಾರಣದಿಂದ ಬೇಸತ್ತು ನೇಣು ಹಾಕಿಕೊಂಡಿರಬಹುದೆಂದು ಶಂಕಿಸಿ ದೂರು ನೀಡಿದ್ದಾರೆ.
ಪಟ್ಟಣ ಠಾಣೆಯ ಎಎಸ್ಐ ನಿಂಗೇಗೌಡ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ವೈದ್ಯರಿಂದ ಶವಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ.