ಚಾಮರಾಜನಗರ: ರಾಜ್ಯ ಸರ್ಕಾರದ ಮೇಜರ್ ಐಪಿಎಸ್ ಸರ್ಜರಿಯಲ್ಲಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಚ್.ಡಿ.ಆನಂದಕುಮಾರ್ ಅವರನ್ನು ವರ್ಗಾವಣೆ ಮಾಡಿ ದಿವ್ಯಾ ಸಾರಾ ಥಾಮಸ್ ಅವರನ್ನು ನಿಯುಕ್ತಿ ಮಾಡಲಾಗಿದೆ.
ಆನಂದಕುಮಾರ್ ವರ್ಗಾವಣೆ: ಚಾಮರಾಜನಗರ ಮೊದಲ ಮಹಿಳಾ ಎಸ್ಪಿಯಾಗಿ ದಿವ್ಯಾ ಥಾಮಸ್ - H d anand Kumar transfer news
ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಚ್.ಡಿ.ಆನಂದಕುಮಾರ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ದಿವ್ಯಾ ಸಾರಾ ಥಾಮಸ್ ಅವರನ್ನು ನಿಯುಕ್ತಿ ಮಾಡಲಾಗಿದೆ.
Divya Thamas
ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿಯಾಗಿರುವ ದಿವ್ಯಾ ಸಾರಾ ಥಾಮಸ್ ಚಾಮರಾಜನಗರದ ಮೊದಲ ಮಹಿಳಾ ಎಸ್ಪಿಯಾಗಿ ಬರುತ್ತಿದ್ದಾರೆ. ಇನ್ನು ಆನಂದಕುಮಾರ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಆನಂದಕುಮಾರ್ ಚೆಕ್‍ಪೋಸ್ಟ್ ಗಳನ್ನು ಬಿಗಿ ಮಾಡುವ ಜೊತೆಗೆ ಅನಗತ್ಯವಾಗಿ ಓಡಾಟ ನಡೆಸುವ ಸವಾರರ ಬೈಕ್ ಗಳನ್ನು ಜಪ್ತಿ ಮಾಡುವಂತೆ ಸೂಚಿಸುವ ಮೂಲಕ ಬಿಸಿ ಮುಟ್ಟಿಸಿದ್ದರು. ಇವರು ಜಿಲ್ಲೆಯಲ್ಲಿ ಎಸ್ ಪಿ ಯಾಗಿ 1 ವರ್ಷ 14 ದಿನಗಳನ್ನು ಪೂರೈಸಿದ್ದಾರೆ.