ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ಪ್ರವಾಹ ಭೀತಿ ಹಿನ್ನಲೆ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ - ಕೊಳ್ಳೇಗಾಲ: ಪ್ರವಾಹ ಭೀತಿ ಹಿನ್ನಲೆ

ನದಿ ಪಾತ್ರದ ಗ್ರಾಮಗಳಾದ ದಾಸನಪುರ, ಯಡಕೂರಿಯ, ಹಳೆ ಅಣಗಳ್ಳಿ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಈ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

District Secretary Visit villages Backwater River threat of floods
ಕೊಳ್ಳೇಗಾಲ: ಪ್ರವಾಹ ಭೀತಿ ಹಿನ್ನಲೆ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ

By

Published : Aug 7, 2020, 4:13 PM IST

Updated : Aug 7, 2020, 4:57 PM IST

ಕೊಳ್ಳೇಗಾಲ: ಕಬಿನಿ ಹಾಗೂ ಕಾವೇರಿಯಿಂದ 50 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನಲೆ ನದಿ ತೀರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೊಳ್ಳೇಗಾಲ: ಪ್ರವಾಹ ಭೀತಿ ಹಿನ್ನಲೆ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ

ಭೇಟಿಯ ವೇಳೆ‌ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಬಿ.ಕಾವೇರಿ , ಕಬಿನಿ ಮತ್ತು ಕಾವೇರಿ ಜಲಾಶಯದಿಂದ ನೀರು ಹೆಚ್ಚಿನ ಮಟ್ಟದಲ್ಲಿ ಬಿಡುಗಡೆಯಾದ್ದಲ್ಲಿ ಕಬಿಬಿ ನೀರಾವರಿ ಇಲಾಖೆ ಎಚ್ಚರವಾಗಿದ್ದು ಜನರಿಗೆ ಮಾಹಿತಿ ತಿಳಿಸುವಂತೆ ಸೂಚನೆ ನೀಡಲಾಗಿದೆ.

ಮುಂಜಾಗ್ರತಾ ಸಭೆಯನ್ನು ಸಹ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಲಾಗಿದೆ. ತಾಲ್ಲೂಕಿನ ಆಡಳಿತ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ನೀರಿನ ಒಳ ಮತ್ತು‌ ಹೊರ ಅರಿವಿನ ನಿಗಾವಹಿಸಿ ಕೇಂದ್ರ ಸ್ಥಾನದಲ್ಲಿರುವಂತೆ ತಿಳಿಸಲಾಗಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಈಗಾಗಲೇ ಸದ್ಯ ಇರುವ ಬೆಳೆಯ ಚಿತ್ರವನ್ನು ಸಂಗ್ರಹಿಸಲು ತಿಳಿಸಿದ್ದು, ವಾಸ್ತವ ಸ್ಥಿತಿಯಲ್ಲಿರುವ ಮನೆಗಳ ಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ.

ಪಿಡಬ್ಲ್ಯೂಡಿ ಇಲಾಖೆಯಿಂದ ರಸ್ತೆಯ ದುರಸ್ತಿಯ ಸರ್ವೆಯೂ ಆಗಿದೆ. ಸರಿಯಾದ ಸಮಯಕ್ಕೆ ಜಾನುವಾರುಗಳ ರವಾನೆಗೂ ಸೂಕ್ತ ಜಾಗ ಗೊತ್ತುಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ಕಳೆದ ಭಾರಿ ಪ್ರವಾಹ ಬಂದಾಗ ಜನರನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಲು ತುಂಬಾ ಕಷ್ಟವಾಗಿತ್ತು. ಆದರೆ ಈ‌ ಬಾರಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ಜನರು ಅದಕ್ಕೆ ಸ್ಪಂದಿಸಬೇಕು ಎಂದಿದ್ದಾರೆ.

Last Updated : Aug 7, 2020, 4:57 PM IST

ABOUT THE AUTHOR

...view details