ಕರ್ನಾಟಕ

karnataka

ETV Bharat / state

ಚುನಾವಣಾ ಪೊಲೀಸ್​ ಸಿಬ್ಬಂದಿಗೆ ಫುಡ್ ಪ್ಯಾಕೇಟ್ ನೀಡಲು ಮುಂದಾದ ಜಿಲ್ಲಾಡಳಿತ - undefined

ಚುನಾವಣೆ ಬಂದರೆ ನಗರದಲ್ಲಿ ಯಾವುದೇ ರೀತಿಯ ಗದ್ದಲ, ಗಲಾಟೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸ್​ ಇಲಾಖೆಯ ಮೇಲಿರುತ್ತದೆ. ಹಾಗಾಗಿ ಈ ಬಾರಿ ಪೊಲೀಸ್​ ಅಧಿಕಾರಿಗಳಿಗೆ ಉತ್ತಮವಾದ ಆಹಾರ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಪೊಲೀಸ್​ ಸಿಬ್ಬಂದಿಗೆ ಪುಡ್ ಪ್ಯಾಕೇಟ್

By

Published : Apr 18, 2019, 12:20 AM IST

ಚಾಮರಾಜನಗರ:ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರ ಮೇಲಿದ್ದು, ಕಾನೂನು ಕಾಯುವ ಪೊಲೀಸ್​ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾಡಳಿತ ಮುಂದಾಗಿದೆ.

ಈ ಬಾರಿ ಲೋಕಸಭಾ ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಇದಕ್ಕೆ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ಜ್ಯೂಸ್ ಸ್ಯಾಷೆ, ಒಡೋಮಸ್ ಕ್ರೀಂ, ಸೋಪ್, 2 ಪ್ಯಾಕೆಟ್ ಬಿಸ್ಕೆಟ್, ಡ್ರೈ ಫ್ರೂಟ್ಸ್, ಒಂದು ಸ್ವೀಟ್, ನಂದಿನಿ ಮಜ್ಜಿಗೆ, ವಾಟರ್ ಬಾಟಲ್​​ನೊಂದಿಗೆ ಪುರಿ ಇಲ್ಲವೇ ಚಪಾತಿ, ಪಲಾವ್ ನೀಡಲಾಗುತ್ತಿದೆ.

ಈ ಬಾರಿ ನೀಡುತ್ತಿರುವ ಆಹಾರ ಪರವಾಗಿಲ್ಲ. ಕಳೆದ ಚುನಾವಣೆಗಳಲ್ಲಿ ಬಾತ್-ಮೊಸರನ್ನವನ್ನಷ್ಟೇ ನೀಡಲಾಗುತ್ತಿತ್ತು. ಈ ಬಾರಿ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ. ಮಸ್ಕಿಟೋ ಕ್ರೀಂ ನೀಡುತ್ತಿರುವುದು ಒಳ್ಳೆಯದು ಎಂದು ಪೊಲೀಸ್​ ಸಿಬ್ಬಂದಿ 'ಈಟಿವಿ ಭಾರತ​'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

For All Latest Updates

TAGGED:

ABOUT THE AUTHOR

...view details