ಚಾಮರಾಜನಗರ: ಕೊರೊನಾ ಭೀತಿಯಲ್ಲಿ ಕಾಡಂಚಿನ ಜನ ಜೀವನರ ದುಸ್ತರವಾಗುತ್ತಿರುವ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ 5 ಸಾವಿರ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
5 ಸಾವಿರ ಕುಟುಂಬಗಳಿಗೆ 25 ಟನ್ ಅಕ್ಕಿ ವಿತರಣೆ: ಬಡವರ ಮನೆ ಸೇರಿದ ಮಾದಪ್ಪನ ಪ್ರಸಾದ! - ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನ್ಯೂಸ್
ಕೊರೊನಾ ಹಿನ್ನೆಲೆ ಅನೇಕರು ಆಹಾರಕ್ಕಾಗಿ ಕಷ್ಟ ಪಡುತ್ತಿದ್ದು, ಮಲೆ ಮಹದೇಶ್ವರ ದೇವಾಲಯಕ್ಕೆ ಭಕ್ತರು ನೀಡಿದ್ದ 25 ಟನ್ ಅಕ್ಕಿಯನ್ನು 5 ಸಾವಿರ ಕುಟುಂಬಗಳಿಗೆ ವಿತರಣೆ ಮಾಡಲಾಯಿತು.
ಚಾಮರಾಜನಗರದಲ್ಲಿ ಅಕ್ಕಿ ವಿತರಣೆ
ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ದಾನಿಗಳು ನೀಡಿರುವ 25 ಟನ್ ಅಕ್ಕಿಯನ್ನು ಸಂಕಷ್ಟದ ಸಮಯದಲ್ಲಿ ಬಡವರಿಗೆ ಉಚಿತವಾಗಿ ಹಂಚಲು ಮುಂದಾಗಿದ್ದು, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಚಿವ ಸುರೇಶ್ ಕುಮಾರ್, ಗೋಪಿನಾಥಂ, ಚಂಗಡಿ ಗ್ರಾಮಗಳಲ್ಲಿ ಪಡಿತರ ವಿತರಿಸಿದರು.
ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗೋಪಿನಾಥಂ, ಮಾರ್ಟಳ್ಳಿ, ರಾಮಾಪುರ, ಪಡಿಸಲನತ್ತ ಸೇರಿದಂತೆ ಪ್ರತಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ ಸೇರಿದಂತೆ ಆಹಾರ ಸಾಮಾಗ್ರಿ, ಡಬಲ್ ಲೇಯರ್ ಮಾಸ್ಕ್ಗಳನ್ನು ಪ್ರಾಧಿಕಾರ ನೀಡಲಿದೆ.