ಕರ್ನಾಟಕ

karnataka

ETV Bharat / state

ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚೆ... ಚಾಮರಾಜನಗರದಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ - ಪರೀಕ್ಷಾ ಪೇ ಚರ್ಚೆ ಎಂಬ ಸಂವಾದ ಕಾರ್ಯಕ್ರಮ

ಪರೀಕ್ಷಾ ಪೇ ಚರ್ಚೆ ಎಂಬ ಸಂವಾದ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ನಡೆಸಿಕೊಡಲಿದ್ದಾರೆ.

Two students selected from Chamarajanagar
ಚಾಮರಾಜನಗರದಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

By

Published : Jan 9, 2020, 3:18 PM IST

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 20 ರಂದು ನಡೆಸಿಕೊಡುವ ಸಂವಾದ ಕಾರ್ಯಕ್ರಮ ಪರೀಕ್ಷಾ ಪೇ ಚರ್ಚೆಗೆ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಆದರ್ಶ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಹಾಗೂ ಯಳಂದೂರು ತಾಲೂಕಿನ ಮೆಲ್ಲಹಳ್ಳಿ ಆದರ್ಶ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅರ್ಫತ್ ಆಯ್ಕೆಯಾಗಿದ್ದಾರೆ.

ಜ.16 ರಂದು ಬೆಂಗಳೂರಿನಲ್ಲಿ ಇಬ್ಬರೂ ವಿದ್ಯಾರ್ಥಿಗಳು ವರದಿ ಮಾಡಿಕೊಳ್ಳಲಿದ್ದು, 20 ರಂದು ವಿಡಿಯೋ ಕಾನ್ಪೆರೆನ್ಸ್ ಮೂಲಕ ಪ್ರಧಾನಿಯೊಂದಿಗೆ ಸಂವಾದ ನಡೆಸಲಿದ್ದಾರೆ. ಇನ್ನು, ಅಪೂರ್ವ ಸೇನೆಯಲ್ಲಿ ವೈದ್ಯೆಯಾಗುವ ಕುರಿತು ಪ್ರಬಂಧ ಬರೆದಿದ್ದರೇ, ಅರ್ಫತ್ ಎಕ್ಸಾಂ ಮತ್ತು ಎಕ್ಸಾಮಿಂಗ್ ವಿಷಯದ ಕುರಿತು ಪ್ರಬಂಧ ಬರೆದಿದ್ದರು‌‌.

ABOUT THE AUTHOR

...view details