ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಯಡಿಯೂರಪ್ಪ ತಾರತಮ್ಯ ಮಾಡುತ್ತಿದ್ದಾರೆ : ಧ್ರುವನಾರಾಯಣ್​ ಟೀಕೆ

ಮೌಢ್ಯಕ್ಕೆ ಜೋತುಬಿದ್ದು ಚಾಮರಾಜನಗರಕ್ಕೆ ಸಿಎಂ ಬರಲಿಲ್ಲ. ಅನುದಾನವನ್ನೂ ಕೊಡಲಿಲ್ಲ. ವಿಜಯೇಂದ್ರ ಸೂಪರ್ ಸಿಎಂ ಆಗಿದ್ದರಿಂದ, ಸಂಕುಚಿತ ಮನಸ್ಥಿತಿಯಿಂದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತಿಳಿಸಿದ್ದಾರೆ.

dhruvanarayana
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್

By

Published : Jul 29, 2021, 10:03 PM IST

ಚಾಮರಾಜನಗರ:ಮಾಜಿ ಸಿಎಂ ಬಿ. ಎಸ್‌‌ ಯಡಿಯೂರಪ್ಪ ಸಾವಿನಲ್ಲೂ ತಾರತಮ್ಯ ಮಾಡುತ್ತಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್​ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಆಕ್ಸಿಜನ್ ದುರಂತದಿಂದ 36 ಜನ ಸಾವಿಗೀಡಾದಾಗ ಯಡಿಯೂರಪ್ಪ ಬರಲಿಲ್ಲ. ಆದರೆ, ಗುಂಡ್ಲುಪೇಟೆಯಲ್ಲಿ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಾಂತ್ವನ ಹೇಳಲು ಬರುತ್ತಿದ್ದಾರೆ. ಈ ನಡೆ ಸರಿಯಲ್ಲ. ಸಾವಿನಲ್ಲೂ ತಾರತಮ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್

ನಾಯಿ ತೀರಿಕೊಂಡಾಗ ಕಣ್ಣೀರು: ಸಿಎಂ ಆದವರಿಗೆ ಹೃದಯವಂತಿಕೆ ಇರಬೇಕು. ಯಡಿಯೂರಪ್ಪ ಅವರಿಗೆ ಅದು ಇರಲಿಲ್ಲ. ಸರ್ಕಾರದ ಕರ್ತವ್ಯದ ಲೋಪದಿಂದ ದೊಡ್ಡ ದುರ್ಘಟನೆ ಸಂಭವಿಸಿತು‌. ಬೊಮ್ಮಾಯಿ ಅವರು ಆಗ ಗೃಹಸಚಿವರಾಗಿದ್ದರು. ಅವರಾದರೂ ಸಾಂತ್ವನ ಹೇಳಲು ಬರಬೇಕಿತ್ತು‌. ಅವರ ಮನೆ ನಾಯಿ ತೀರಿಕೊಂಡಾಗ ಕಣ್ಣೀರಾಕಿದ್ದಾರೆ. ಇಷ್ಟೊಂದು ಜನರ ಸಾವಿಗೆ ಯಾಕೆ ಕಂಬನಿ ಮಿಡಿಯಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸಿಎಂ ಬೊಮ್ಮಾಯಿ ಬರಬೇಕು: ಮೌಢ್ಯಕ್ಕೆ ಜೋತುಬಿದ್ದು ಚಾಮರಾಜನಗರಕ್ಕೆ ಸಿಎಂ ಬರಲಿಲ್ಲ. ಅನುದಾನವನ್ನೂ ಕೊಡಲಿಲ್ಲ. ವಿಜಯೇಂದ್ರ ಸೂಪರ್ ಸಿಎಂ ಆಗಿದ್ದರಿಂದ, ಸಂಕುಚಿತ ಮನಸ್ಥಿತಿಯಿಂದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು‌. ನೂತನ ಸಿಎಂ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಬರಬೇಕು. ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ನಿನ್ನೆ ತರಾತುರಿಯಲ್ಲಿ ಗುಂಡ್ಲುಪೇಟೆಗೆ ಭೇಟಿ ನೀಡಿದ್ದಾರೆ. ಆದರೆ, ಆಕ್ಸಿಜನ್ ದುರಂತದ 36 ಸಂತ್ರಸ್ತರ ಮನೆಗೇಕೆ ಬಾರದೇ ತಾರತಮ್ಯ ಮಾಡಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅವರ ವಿರುದ್ಧವೂ ಆಕ್ರೋಶ ಹೊರಹಾಕಿದರು‌.

ಓದಿ:ಅಪರೂಪಕ್ಕೆ ಭೇಟಿ ನೀಡಿದ ಶಾಸಕ ದುರ್ಯೋಧನ: ಬೀರಡಿ ಗ್ರಾಮಸ್ಥರಿಂದ ತರಾಟೆ

ABOUT THE AUTHOR

...view details