ಕರ್ನಾಟಕ

karnataka

ETV Bharat / state

ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು.. - Vishvesh Theertha Swamiji passed away

ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನಿಧನರಾಗಿದ್ದಕ್ಕೆ ಅವರ ಭಕ್ತ ವೃಂದ ಶೋಕ ಸಾಗರದಲ್ಲಿ ಮುಳುಗಿದೆ. ಚಾಮರಾಜನಗರದಲ್ಲೂ ಅವರ ಭಕ್ತರು ಕಂಬನಿ ಮಿಡಿದಿದ್ದಾರೆ.

feffff
ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು

By

Published : Dec 29, 2019, 5:08 PM IST

ಚಾಮರಾಜನಗರ:ವಿಶ್ವ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಅಗಲಿಕೆಗೆ ಗಡಿ ಜಿಲ್ಲೆಯ ಭಕ್ತರು ಕಂಬನಿ ಮಿಡಿದಿದ್ದಾರೆ.

ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು..
ನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಜಮಾಯಿಸಿದ ಭಕ್ತರು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದಲಿತರ ಅಭಿವೃದ್ಧಿಗೆ, ಸಮಾಜದ ಏಳಿಗೆಗೆ ಹಾಗೂ ಹಿಂದೂ ಧರ್ಮದ ಉನ್ನತಿಗೆ ದುಡಿದ ಪೇಜಾವರ ಶ್ರೀಗಳ ಅಗಲಿಕೆಯು ಭಕ್ತಸಮೂಹಕ್ಕೆ ತುಂಬಲಾರದ ನಷ್ಟ ಎಂದು ಶೋಕ ವ್ಯಕ್ತಪಡಿಸಿದರು. ಶ್ರೀಗಳು ಗಡಿಜಿಲ್ಲೆಗೆ 4-5 ಬಾರಿ ಭೇಟಿ ನೀಡಿದ್ದು 5-6 ವರ್ಷಗಳ ಹಿಂದೆ ಕೊಯಮತ್ತೂರಿಗೆ ತೆರಳುವಾಗ ನಗರದ ಹಲವಾರು ಜನರಿಗೆ ಫಲಮಂತ್ರಾಕ್ಷತೆ ವಿತರಿಸಿದ್ದನ್ನು ಇದೇ ವೇಳೆ ಹಲವರು ನೆನಪಿಸಿಕೊಂಡರು.

ABOUT THE AUTHOR

...view details