ಚಾಮರಾಜನಗರ: ಜಾತ್ರೆ ಮುಗಿದಿದ್ದರೂ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಜನಸಾಗರವೇ ಹರಿದು ಬರುತ್ತಿದೆ. ಕೇವಲ ಎರಡು ದಿನಗಳಿಗೆ ಬರೀ ಸೇವೆಗಳಿಂದ 20 ಲಕ್ಷ ರೂ. ಆದಾಯ ಬಂದಿದೆ ಎಂದು ವರದಿಯಾಗಿದೆ.
ಕೊರೊನಾ ನಂತರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬರುತ್ತಿದ್ದು, ಸೋಮವಾರ ಒಂದೇ ದಿನ 17,94,289 ರೂ. ಆದಾಯ ಬಂದಿದ್ದು, ಮಂಗಳವಾರ 2,26,536 ಲಕ್ಷ ರೂ ಆದಾಯ ಬಂದಿದೆ ಎಂದು ಹೇಳಲಾಗಿದೆ. ಎರಡು ದಿನಗಳಲ್ಲಿ ಹಲವು ಸೇವೆಗಳಾದ ಚಿನ್ನದ ರಥ, ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ವಾಹನ ಸೇವೆಗಳಿಂದ ಲಕ್ಷಾಂತರ ರೂ. ಆದಾಯ ಬಂದಿರುವುದಾಗಿ ಹೇಳಲಾಗಿದೆ. ಸೋಮವಾರದಂದು ಚಿನ್ನದ ರಥ ಸೇವೆ 13 ಲಕ್ಷ ಆದಾಯ ಬಂದಿದ್ದು, ಕಳೆದ ಎರಡು ದಿನಗಳಿಂದ 450 ಕ್ಕೂ ಹೆಚ್ಚು ಮಂದಿ ಚಿನ್ನದ ರಥ ಸೇವೆ ನೆರವೇರಿಸಿದ್ದಾರೆ. ಮತ್ತು ಒಂದೂವರೆ ಸಾವಿರ ಮಂದಿ ಹುಲಿವಾಹನ ಸೇವೆಯನ್ನು ನೆರವೇರಿಸಿದ್ದಾರೆ.