ಕರ್ನಾಟಕ

karnataka

ETV Bharat / state

ಸರಳು ಚುಚ್ಚಿಕೊಂಡು ಜೆಸಿಬಿಯಲ್ಲಿ ನೇತಾಡಿದ ಭಕ್ತರು...  ಕಾಯ್ದೆ ಜಾರಿಯಾದರೂ ನಿಂತಿಲ್ಲ ಭಕ್ತಿ ಪರಾಕಾಷ್ಠೆ - ಗ್ರಾಮ ದೇವತೆ ಹಬ್ಬ

ಹನೂರು ತಾಲೂಕಿನ‌ ನಲ್ಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಗ್ರಾಮ ದೇವತೆ ಹಬ್ಬದಲ್ಲಿ ಮೂವರು ಮಂದಿ ಬೆನ್ನಿಗೆ ಸರಳು ಚುಚ್ಚಿಕೊಂಡು ಜೆಸಿಬಿಯಲ್ಲಿ ನೇತಾಡಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ‌.

Devotees hanging in the JCB
ಜೆಸಿಬಿಯಲ್ಲಿ ನೇತಾಡಿದ ಭಕ್ತರು

By

Published : Mar 12, 2020, 11:49 AM IST

Updated : Mar 12, 2020, 3:02 PM IST

ಚಾಮರಾಜನಗರ:ಮೌಢ್ಯ ಪ್ರತಿಬಂಧಕ ರಾಜ್ಯದಲ್ಲಿ ಜಾರಿಯಾಗಿದ್ದರೂ ಮೌಢ್ಯಗಳು ಮಾತ್ರ ನಿಂತಿಲ್ಲ ಎಂಬುದಕ್ಕೆ ಬೆನ್ನಿಗೆ ಸರಳು ಚುಚ್ಚಿಕೊಂಡು ನೇತಾಡಿರುವ ಈ ಘಟನೆಯೇ ನಿದರ್ಶನ.

ಸರಳು ಚುಚ್ಚಿಕೊಂಡು ಜೆಸಿಬಿಯಲ್ಲಿ ನೇತಾಡಿದ ಭಕ್ತರು

ಹನೂರು ತಾಲೂಕಿನ‌ ನಲ್ಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಗ್ರಾಮ ದೇವತೆ ಹಬ್ಬದಲ್ಲಿ ಮೂವರು ಮಂದಿ ಬೆನ್ನಿಗೆ ಸರಳು ಚುಚ್ಚಿಕೊಂಡು ಜೆಸಿಬಿಯಲ್ಲಿ ನೇತಾಡಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ‌. ಇಷ್ಟು ಸಾಲದು ಎಂಬಂತೆ ಅದರಲ್ಲೋರ್ವ ಮಗುವನ್ನು ಎತ್ತಿಕೊಂಡು ನೋಡುವವರ ಮೈ ನವಿರೇಳಿಸುವಂತೆ ಮಾಡಿದ್ದು ಮೌಢ್ಯತೆಯ ಉತ್ತುಂಗ ತೋರ್ಪಡಿಸಿದ್ದಾನೆ.

ಎಷ್ಟೇ ಕಾಲ ಬದಲಾದರೂ ನಂಬಿಕೆಗಳ ಹೆಸರಿನಲ್ಲಿ ಮೌಢ್ಯತೆಯನ್ನು ಸಾರುತ್ತಿರುವವರಿಗೆ ಇನ್ನಾದರೂ ಅಧಿಕಾರಿಗಳು, ಪೊಲೀಸರು ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೇ, ಮೌಢ್ಯ ಪ್ರತಿಬಂಧಕ ಕಾಯ್ದೆ ಪುಸ್ತಕದಲ್ಲಷ್ಟೇ ಉಳಿಯಲಿದೆ.

Last Updated : Mar 12, 2020, 3:02 PM IST

ABOUT THE AUTHOR

...view details