ಕರ್ನಾಟಕ

karnataka

ETV Bharat / state

ಭಾರತ್ ಜೋಡೋ ಯಾತ್ರೆಯಲ್ಲಿ ದೇವನೂರು ಮಹಾದೇವ ಭಾಗಿ: ರಾಹುಲ್​ಗೆ ಸಂವಿಧಾನ ಪೀಠಿಕೆ ಉಡುಗೊರೆ - ಸಂವಿಧಾನ ಪುಸ್ತಕ

ಭಾರತ ಐಕ್ಯತಾ ಯಾತ್ರೆಗೆ ಸಾಹಿತಿ ದೇವನೂರು ಮಹಾದೇವ ಬೆಂಬಲ ನೀಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತೀಯ ಸಂವಿಧಾನ ಪುಸ್ತಕ ಹಾಗೂ ಪೀಠಿಕೆ ಪ್ರತಿ ಉಡುಗೊರೆಯಾಗಿ ನೀಡಿದರು.

devanur mahadeva
ಭಾರತ್ ಜೋಡೋ ಯಾತ್ರೆಯಲ್ಲಿ ದೇವನೂರು ಮಹಾದೇವ ಭಾಗಿ

By

Published : Sep 30, 2022, 12:09 PM IST

ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶ ಮಾಡಿದ್ದು, ಚಿಂತಕ ಮತ್ತು ಸಾಹಿತಿ ದೇವನೂರು ಮಹಾದೇವ ಐಕ್ಯತಾ ಯಾತ್ರೆಗೆ ಬೆಂಬಲ ಕೊಟ್ಟಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ದೇವನೂರು ಮಹಾದೇವ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರತೀಯ ಸಂವಿಧಾನ ಪುಸ್ತಕ ಹಾಗೂ ಪೀಠಿಕೆ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.

ವೇದಿಕೆ ಕಾರ್ಯಕ್ರಮವನ್ನ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಲಾಯಿತು. ನಗಾರಿಯನ್ನು ಡಿಕೆಶಿ, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಒಟ್ಟಿಗೆ ಬಾರಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು.

ಇದನ್ನೂ ಓದಿ:ಬಂಡೀಪುರ ಮೂಲಕ ರಾಜ್ಯಕ್ಕೆ ರಾಹುಲ್ ಎಂಟ್ರಿ: ರಾಜ್ಯ ಕಾಂಗ್ರೆಸ್​​ ನಾಯಕರಿಂದ ಸ್ವಾಗತ

ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಜಾನಪದ ಕಲಾತಂಡಗಳೊಂದಿಗೆ ಪಾದಯಾತ್ರೆ ಹೊರಟಿದ್ದು, 12 ಗಂಟೆ ಹೊತ್ತಿಗೆ ಕೆಬ್ಬೆಕಟ್ಟೆ ಬಳಿ ಸೋಲಿಗರು ಮತ್ತು ಆ್ಯಕ್ಸಿಜನ್ ಸಂತ್ರಸ್ತರೊಟ್ಟಿಗೆ ಸಂವಾದ ಏರ್ಪಡಿಸಲಾಗಿದೆ.

20 ಸಾವಿರಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದು, ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್​ ನಾಯಕರುಗಳು ಮುಂಚೂಣಿಯಲ್ಲಿ ನಡೆಯುತ್ತಿದ್ದಾರೆ.

ABOUT THE AUTHOR

...view details