ಕೊಳ್ಳೇಗಾಲ (ಚಾಮರಾಜನಗರ) : ಅಕ್ರಮವಾಗಿ ಸಿಡಿಮದ್ದುಗಳನ್ನು ತಯಾರಿಸಿ ಬೇಟೆಗೆ ಒಯ್ಯುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಮೇಗಲದೊಡ್ಡಿಯ ಜೋಸೆಫ್ (64) ಬಂಧಿತ ಆರೋಪಿ. ಈತ ಕಾಡು ಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ಸಿಡಿಮದ್ದು ತಯಾರಿಸಿಕೊಂಡು ಮನೆಯಿಂದ ಹೊರಟಿದ್ದ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಎಸ್ಐ ಮುದ್ದುಮಾದೇವ ಸಿಬ್ಬಂದಿ ಮಡಕೇರಿ ಅರಣ್ಯ ಸಂಚಾರಿ ಘಟಕದ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ, ಸಿಡಿಮದ್ದು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.