ಕರ್ನಾಟಕ

karnataka

ETV Bharat / state

ಅಣ್ಣಾವ್ರ ತವರಲ್ಲಿ ಬಾಧಿಸುತ್ತಿದೆ ಡೆಂಗ್ಯೂ-ಚಿಕೂನ್ ಗುನ್ಯಾ‌...ಕಾಲಿಡದ ಶಾಸಕ, ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಶಾಪ! - Dengue-Chikun Gunya Fever

ಡಾ.ರಾಜ್​​ಕುಮಾರ್ ತವರಾದ ಹನೂರು ಕ್ಷೇತ್ರ ವ್ಯಾಪ್ತಿ ಸಿಂಗಾನಲ್ಲೂರಿನಲ್ಲಿ 60ಕ್ಕೂ ಹೆಚ್ಚು ಮಂದಿ ಚಿಕೂನ್ ಗುನ್ಯಾ, ಡೆಂಗ್ಯೂನಿಂದ ಬಳಲುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

Dengue-Chikun Gunya Fever
Dengue-Chikun Gunya Fever

By

Published : Jan 2, 2020, 5:05 PM IST

ಚಾಮರಾಜನಗರ:ವರನಟ ಡಾ.ರಾಜ್​​ಕುಮಾರ್ ಅವರ ತವರಾದ ಹನೂರು ಕ್ಷೇತ್ರ ವ್ಯಾಪ್ತಿ ಸಿಂಗಾನಲ್ಲೂರಿನಲ್ಲಿ 60ಕ್ಕೂ ಹೆಚ್ಚು ಮಂದಿ ಚಿಕೂನ್ ಗುನ್ಯಾ, ಡೆಂಗ್ಯೂನಿಂದ ಬಳಲುತ್ತಿದ್ದಾರೆ.

ಗ್ರಾಮದಲ್ಲಿ ತಿಂಗಳಿನಿಂದ ಡೆಂಗ್ಯೂ, ಚಿಕೂನ್ ಗುನ್ಯಾ ಜ್ವರ ಹಲವಾರು ಮಂದಿಗೆ ಕಾಣಿಸಿಕೊಂಡಿದೆ. ದಿನನಿತ್ಯ ಜನರು ಆಸ್ವತ್ರೆಗೆ ಅಲೆದಾಡುತ್ತಿದ್ದಾರೆ.

ಡೆಂಗ್ಯೂ-ಚಿಕೂನ್ ಗುನ್ಯಾ‌ದಿಂದ ಬಳಲುತ್ತಿರುವ ಗ್ರಾಮಸ್ಥರು

ಅಷ್ಟೇ ಅಲ್ಲದೇ, ಇಂದು ಗ್ರಾಪಂ ಅಧ್ಯಕ್ಷರ ಮಗ ಸಾಗರ್ (30) ಎಂಬಾತನೇ ಡೆಂಗ್ಯೂ ವ್ಯಾದಿಗೆ ಬಲಿಯಾಗಿದ್ದಾನೆ. ಗ್ರಾಮದಲ್ಲಿ ತಾಂಡವವಾಡುವ ಅನೈರ್ಮಲ್ಯ, ಹೆಚ್ಚುತ್ತಿರುವ ಸೊಳ್ಳೆಗಳೇ ರೋಗದ ಮೂಲವಾಗಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಚೇತರಿಕೆ ಕಾಣದೇ ಗ್ರಾಮಸ್ಥರೆಲ್ಲರೂ ಒದ್ದಾಡುತ್ತಿದ್ದರೂ, ಈವರೆಗೂ ಸ್ಥಳಿಯ ಶಾಸಕ ಆರ್.ನರೇಂದ್ರ ಅಥವಾ ತಾಲೂಕು ಆಡಳಿತ ಅಧಿಕಾರಿಗಳು ಇತ್ತ ಕಾಲಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details