ಕರ್ನಾಟಕ

karnataka

ETV Bharat / state

ಜಿಂಕೆ, ಮೊಲ ಬೇಟೆ: 6 ಮಂದಿ ಬಂಧನ - Deer, rabbit hunting chamarajanagar news

ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಓಂಕಾರ್ ವನ್ಯಜೀವಿ ವಲಯದಲ್ಲಿ ಮೂರು ಜಿಂಕೆ, ಒಂದು ಮೊಲವನ್ನು ಉರುಳು ಹಾಕಿ ಬೇಟೆಯಾಡಿ, ಅಡುಗೆ ಮಾಡಲು ತಯಾರಿ ನಡೆಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಜಿಂಕೆ, ಮೊಲ ಬೇಟೆ
ಜಿಂಕೆ, ಮೊಲ ಬೇಟೆ

By

Published : Jan 7, 2021, 8:50 PM IST

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಓಂಕಾರ್ ವನ್ಯಜೀವಿ ವಲಯದ ನಾಗಣಾಪುರ ಬ್ಲಾಕ್-2ರಲ್ಲಿ ಅಕ್ರಮವಾಗಿ ಉರುಳು ಹಾಕಿ ಜಿಂಕೆ ಮತ್ತು ಮೊಲ ಬೇಟೆಯಾಡಿದ್ದ, 6 ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಮೂರು ಜಿಂಕೆ, ಒಂದು ಮೊಲವನ್ನು ಉರುಳು ಹಾಕಿ ಬೇಟೆಯಾಡಿ, ಅಡುಗೆ ಮಾಡಲು ತಯಾರಿ ನಡೆಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ವಿದ್ಯಾಸಾಗರ್ (29), ರವೀಂದ್ರ (41), ಯಶೋಧರ (34), ಪ್ರಸನ್ನ (38), ಸುಜಿತ್ (28), ಕುಶಾಲಪ್ಪ (47) ಎಂಬುವವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಓದಿ: ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಚಿರತೆ ಓಡಾಟ..ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಂಧಿತರಿಂದ ಎರಡು ಒಂಟಿನಳಿಕೆ ಬಂದೂಕು, ಮಾರಕಾಸ್ತ್ರಗಳು, ಒಂದು ಮಾರುತಿ ಕಾರು ವಶಕ್ಕೆ ಪಡೆಯಲಾಗಿದೆ. ಎಸಿಎಫ್ ಪರಮೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ABOUT THE AUTHOR

...view details